LATEST NEWS
ದತ್ತ ಪೀಠ ದಾಂಧಲೆ : ಚಿಕ್ಕಮಗಳೂರಿನಲ್ಲಿ ಅಘೋಷಿತ ಬಂದ್
ದತ್ತ ಪೀಠ ದಾಂಧಲೆ : ಚಿಕ್ಕಮಗಳೂರಿನಲ್ಲಿ ಅಘೋಷಿತ ಬಂದ್
ಚಿಕ್ಕಮಗಳೂರು, ಡಿಸೆಂಬರ್ 04 : ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ದತ್ತಜಯಂತಿ ಆಚರಣೆ ವೇಳೆ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿಯ ನಿಷೇಧಿತ ಪ್ರದೇಶದಲ್ಲಿದ್ದ ಗೋರಿಯೊಂದಕ್ಕೆ ಹಾನಿ ಎಸಗಿದ ಪರಿಣಾಮ ತರುವಾಯ ಚಿಕ್ಕಮಗಳೂರಿನಲ್ಲಿ ಪರಿಸ್ಥಿತಿ ಉದ್ವಿಗ್ನ ಗೊಂಡಿದೆ.
ಚಿಕ್ಕಮಗಳೂರು ಹಾಗೂ ಸುತ್ತಮುತ್ತ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಅಣ್ಣಮಲೆ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ನಡೆಸಲಾಗುತ್ತಿದೆ.
ಅನೆಕ ಅಲ್ಲಲ್ಲಿ ಸೇರಿದ್ದ ಗುಂಪುಗಳನ್ನು ಚದುರಿಸಲು ಪೋಲಿಸರರು ಲಾಠಿ ಚಾರ್ಜ್ ನಡೆಸಿದ್ದಾರೆ.
ನಗರದ ಮುಖ್ಯ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.ನಗರದಲ್ಲಿ ಕಿಡಿಗೇಡಿಗಳು ಖಾಸಗಿ ಬಸ್ಸುಗಳಿಗೆ, ಅಂಗಡಿಯೊಂದರ ಮೇಲೆ ಕಲ್ಲು ತೂರಿದ್ದರಿಂದ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಇದುವರೆಗೆ ನಾಲ್ವರು ಗಾಯಗೊಂಡಿದ್ದು, ಮೂವರು ಪೋಲಿಸರು ಗಾಯಗೊಂಡಿದ್ದಾರೆ.ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಸೇರಿದಂತೆ ಜಿಲ್ಲಾದ್ಯಂತ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ಗಲಭೆಗೆ ಕಾರಣ ಏನು ?:
ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಮ್ಮಿಕೊಂಡಿದ್ದ ದತ್ತ ಜಯಂತಿಯ ಕೊನೆ ದಿನವಾದ ನಿನ್ನೆ ಭಾನುವಾರ ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ದತ್ತಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ನಿಂತು ದತ್ತಪಾದುಕೆಗಳ ದರ್ಶನ ಪಡೆದು ಗುಹೆಯಿಂದ ಹೊರಗೆ ಬರುತ್ತಿದ್ದ ಸಂದರ್ಭ ಓರ್ವ ದತ್ತಮಾಲಾಧಾರಿ ಕಣ್ಣು ತಪ್ಪಿಸಿ ಬಗಿ ಪೋಲಿಸ್ ಬಂದೊಬಸ್ತ್ ಇರುವ ನಿಷೇಧಿತ ಪ್ರದೇಶದೊಳಗೆ ನುಗ್ಗಿ ಕೇಸರಿ ಧ್ವಜ ಹಾರಿಸಿದ್ದಾನೆ.
ಈ ಸಂದರ್ಭದಲ್ಲಿ ಉಳಿದ ದತ್ತಮಾಲಧಾರಿಗಳು ಅವನಿಗೆ ಸಾಥ್ ನೀಡಿ ಘೋಷಣೆಗಳು ಜೋರಾಗಿವೆ.
ಈ ವೇಳೆ ದತ್ತ ಮಾಲಾಧಾರಿಗಳು ನಿಷೇಧಿತ ಸ್ಥಳದ ಸುತ್ತಲೂ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ನಿಷೇಧಿತ ಸ್ಥಳದೊಳಗೆ ತೆರಳುವ ಯತ್ನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ದತ್ತಮಾಲಾಧಾರಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆ ಸಂಭವಿಸಿದೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶಾಸಕ ಸಿ.ಟಿ.ರವಿ ದತ್ತಮಾಲಾಧಾರಿಗಳನ್ನು ಸಮಾಧಾನಪಡಿಸಿಸಲು ಯತ್ನಿಸಿದ್ದರು ರ್ವಿಲವಾಗಿದೆ.
ಇದೇ ವೇಳೆ ಮತ್ತೂಂದು ಕಡೆಯಿಂದ ನಿಷೇಧಿತ ಸ್ಥಳದೊಳಗೆ ನುಗ್ಗಿದ ಕೆಲವರು ಅಲ್ಲಿದ್ದ ಗೋರಿಯೊಂದರ ಕಲ್ಲನ್ನು ಕಿತ್ತೆಸೆದರಲ್ಲದೆ ಕೇಸರಿ ಧ್ವಜಗಳನ್ನು ಹಾರಿಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು ಲಾಠಿ ಪ್ರಹಾರ ಮಾಡಿ ಎಲ್ಲರನ್ನೂ ಚದುರಿಸಿದ್ದಾರೆ.