KARNATAKA
ಚಿಕ್ಕಮಗಳೂರು : ಹುಲಿ ಉಗುರು ಕಂಟಕ, ಲಾಕೆಟ್ ಹೊಂದಿದ್ದ ಇಬ್ಬರು ಅರ್ಚಕರ ಬಂಧನ..!
ಬಾಳೆಹೊನ್ನೂರು ಸಮೀಪದ ಖಾಂಡ್ಯ ಗ್ರಾಮದ ಮಾರ್ಕಂಡೇಶ್ವರ ದೇವಾಲಯದ ಅರ್ಚಕರಾದ ಕೃಷ್ಣಾನಂದ ಹೊಳ್ಳ ಮತ್ತು ನಾಗೇಂದ್ರ ಜೋಯಿಸ್ ಎಂಬವರನ್ನು ಹುಲಿ ಉಗುರು ಅಳವಡಿಸಿದ ಚೈನ್ ಹೊಂದಿದ ಕಾರಣ ಬಂಧಿಸಲಾಗಿದೆ.
ಚಿಕ್ಕಮಗಳೂರು : ರಾಜ್ಯದಲ್ಲಿ ಪ್ರಸ್ತುತ ರಾಜಕೀಯಕಿಂತ ಹುಲಿ ಉಗುರು ಭಾರಿ ಸದ್ದು ಮಾಡುತ್ತಿದೆ, ಜನ ಸಾಮಾನ್ಯರಿಂದ ಸೆಲೆಬ್ರಿಟಿಗಳ ಮನೆಗಳ ಮೇಲೆ ದಾಳಿಗಳು ಮುಂದುವರೆದಿದೆ,
ಹುಲಿ ಉಗುರಿನ ಲಾಕೆಟ್ ಧರಿಸಿದ ಬಿಗ್ ಬಾಸ್ ಸ್ಪರ್ಧಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ ಬಳಿಕ ಈ ವಿಚಾರ ಮುನ್ನೆಲೆಗೆ ಬಂದಿದೆ.ಅನೇಕರು ಹುಲಿ ಉಗುರಿನ ಗೋಜಿಯೇ ಬೇಡಾವೆಂದು ಅರ್ಣಾಧಿಕಾರಿಗಳಿಗೆ ತಾವಾಗಿಯೇ ಒಪ್ಪಿಸಿದ್ದಾರೆ. ಇದೀಗ ಹುಲಿ ಉಗುರಿನ ಸರ ಹೊಂದಿದ್ದ ಇಬ್ಬರು ಅರ್ಚಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಾಳೆಹೊನ್ನೂರಿನಲ್ಲಿ ಬಂಧಿಸಿದ್ದಾರೆ.ಬಾಳೆಹೊನ್ನೂರು ಸಮೀಪದ ಖಾಂಡ್ಯ ಗ್ರಾಮದ ಮಾರ್ಕಂಡೇಶ್ವರ ದೇವಾಲಯದ ಅರ್ಚಕರಾದ ಕೃಷ್ಣಾನಂದ ಹೊಳ್ಳ ಮತ್ತು ನಾಗೇಂದ್ರ ಜೋಯಿಸ್ ಎಂಬವರನ್ನು ಹುಲಿ ಉಗುರು ಅಳವಡಿಸಿದ ಚೈನ್ ಹೊಂದಿದ ಕಾರಣ ಬಂಧಿಸಲಾಗಿದೆ. ಅವರಿಂದ ಹುಲಿ ಉಗುರಿನ ಮೂರು ಲಾಕೆಟ್ ವಶಕ್ಕೆ ಪಡೆಯಲಾಗಿದೆ. ಇ-ಮೇಲ್ ಮೂಲಕ ಅರಣ್ಯ ಇಲಾಖೆಗೆ ಅನಾಮಧೇಯ ವ್ಯಕ್ತಿಯೊಬ್ಬರು ಅರ್ಚಕರ ಬಳಿ ಹುಲಿ ಉಗುರಿನ ಲಾಕೆಟ್ ಇರುವ ಕುರಿತು ದೂರು ಸಲ್ಲಿಸಿದ್ದರು.ಈ ದೂರಿನ ಅಧಾರದ ಮೇಲೆ ಇಬ್ಬರು ಅರ್ಚಕರ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದಾಗ ಹುಲಿ ಉಗುರಿರುವ ಮೂರು ಲಾಕೆಟ್‌ಗಳು ದೊರೆತಿವೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.