Connect with us

LATEST NEWS

ಚಿಕ್ಕಮಗಳೂರು: ಶಾರ್ಟ್ ಸರ್ಕೀಟ್‌ಗೆ ಹೊತ್ತಿ ಉರಿದ ಕರ್ಣಾಟಕ ಬ್ಯಾಂಕ್ ATM ,5 ಲಕ್ಷ ಹಣ ಭಸ್ಮ..!

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ನಗರದ ಐಜಿ ರಸ್ತೆಯ ಸಾರಗೋಡು ಆರ್ಕೆಡ್​ನಲ್ಲಿರುವ ಕರ್ಣಾಟಕ ಬ್ಯಾಂಕ್ ಎಟಿಎಂ ನಲ್ಲಿ ಅಗ್ನ ಅವಘಡ ಸಂಭವಿಸಿದ್ದು ಎಟಿಎಂ ನಲ್ಲಿದ್ದ 5 ಲಕ್ಷ ಹಣ ಭಸ್ಮವಾಗಿದೆ.

 

ಜೊತೆಗೆ 15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಕೂಡ ಸಂಪೂರ್ಣ ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್​ನಿಂದ  ಈ ಎಟಿಎಂಗೆ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಎಟಿಎಂಗೆ ಬೆಂಕಿ ಹೊತ್ತಿಕೊಂಡ  ಮಾಹಿತಿಯನ್ನು ಹೈದರಾಬಾದ್ ಬ್ಯಾಂಕ್ ಕಂಟ್ರೋಲ್ ರೂಮ್ ​ ಅಗ್ನಿಶಾಮಕ ದಳಕ್ಕೆ ರವಾನಿಸಿದೆ. ಕೂಡಲೆ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.ಆದರೆ ಅದಾಗಲೇ  ನಗದು ಸಹಿತ ಎಟಿಎಂ ಮಷೀನ್ ಸುಟ್ಟು ಕರಕಲಾಗೆ.  ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *