Connect with us

    UDUPI

    ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ :1516.97 ಕೋ. ಕಾಮಗಾರಿ ಶಿಲಾನ್ಯಾಸ-ಉದ್ಘಾಟನೆ

    ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ :1516.97 ಕೋ. ಕಾಮಗಾರಿ ಶಿಲಾನ್ಯಾಸ-ಉದ್ಘಾಟನೆ

    ಉಡುಪಿ ಜನವರಿ.06: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನವರಿ 8 ಸೋಮವಾರದಂದು ಉಡುಪಿ ಜಿಲ್ಲೆಯಲ್ಲಿ ಸಾಧನಾ ಸಮಾವೇಶ ಕೈಗೊಳ್ಳುತ್ತಿದೆ. ಬೈಂದೂರಿನ ಪ್ರೌಢಶಾಲೆಯ ಎದುರಿನ ಗಾಂಧಿ ಮೈದಾನದಲ್ಲಿ ಸಾಧನಾ ಸಮಾವೇಶವು ಬೆಳಿಗ್ಗೆ 10.45 ಕ್ಕೆ ಆರಂಭಗೊಳ್ಳಲಿದೆ. ಇದಕ್ಕೆ ಬೇಕಾದ ಈಗಾಗಲೇ ಸಿದ್ದತೆಗಳು ಆರಂಭಗೊಂಡಿದ್ದು, ವಿಶಾಲ ವೇದಿಕೆ, ಬೃಹತ್ ಪೆಂಡಾಲ್ ನಿರ್ಮಾಣವಾಗುತ್ತಿದೆ.

    ಕನಿಷ್ಠ 20 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ.

    ಇನ್ನೊಂದೆಡೆ ಕ್ಷೇತ್ರದ ಎಲ್ಲ ಮೂಲೆಗಳಿಂದ ಬರುವ ಬೃಹತ್ ಬೈಕ್ ಜಾಥಾ ಸಮಾವೇಶ ನಡೆಯಲಿದೆ.

    ಎಲ್ಲರಿಗೂ ಕುಡಿಯುವ ನೀರು, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

    ಬೈಂದೂರಿನಲ್ಲಿ 490.97 ಕೋಟಿ ಮೊತ್ತದ 36 ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ನಡೆಯಲಿದ್ದು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ 11, ಶಿಕ್ಷಣ ಇಲಾಖೆಯ 7, ಯೋಜನಾ ವಿಭಾಗದ 6, ಆರೋಗ್ಯ ಇಲಾಖೆಯ 3, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಮತ್ತು ಸಣ್ಣ ನೀರಾವರಿ ಇಲಾಖೆಯ ತಲಾ 2, ಜಲಸಂಪನ್ಮೂಲ ಇಲಾಖೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಸಮಾಜಕಲ್ಯಾಣ ಇಲಾಖೆ, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ತಲಾ 1 ಕಾಮಗಾರಿಗಳು ಸೇರಿವೆ.

    ವಿವಿಧ ಸೇತುವೆಗಳ ನಿರ್ಮಾಣ, ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ, ಕೊಲ್ಲೂರು ಪ್ರವಾಸಿ ಮಂದಿರ ಅಭಿವೃದ್ಧಿ, ಬಿಜೂರು, ಉಳ್ಳೂರು ಗ್ರಾಮಗಳಲ್ಲಿ ಕಿಂಡಿ ಅಣೆಕಟ್ಟು ಮುಂತಾದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಹಾಗೂ ನಿರ್ಮಾಣಗೊಂಡ ವಿವಿಧ ಸೇತುವೆ, ರಸ್ತೆ, ಗಂಗೊಳ್ಳಿ ಕಡಲ್ಕೊರೆತ ತಡೆಗೋಡೆ, ಎಸ್ಸ್ ಎಸ್ಟಿ ಕಾಲೋನಿ ರಸ್ತೆಗಳನ್ನು ಉದ್ಘಾಟಿಸಲಿದ್ದಾರೆ.

    ನಂತರ , ಉಡುಪಿ ವಿಧಾನ ಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿಯವರು ಮಧ್ಯಾಹ್ನ 2 ಗಂಟೆಗೆ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ , ಉಡುಪಿ ವಿಧಾನಸಭಾ ಕ್ಷೇತ್ರದ ಒಟ್ಟು 509 ಕೋಟಿ ಮೊತ್ತದ ಕಾಮಗಾರಿಗೆ ಶಿಲಾನ್ಯಾಸ ಮಾಡಲಿದ್ದಾರೆ ಹಾಗೂ 72 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.

    ಉಡುಪಿಯ ಬನ್ನಂಜೆಯಲ್ಲಿ 31 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಖ್ಯಂತ್ರಿಯವರು ಚಾಲನೆ ನೀಡಲಿದ್ದಾರೆ.

    ಮಲ್ಪೆಯ ಮೂರನೇ ಹಂತದ ಬಂದರು ಕಾಮಗಾರಿಯನ್ನು ಉದ್ಘಾಟಿಸಲಿದ್ದಾರೆ.

    ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಹಾಗೂ 2 ಕೋಟಿ ವೆಚ್ಚದ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್ನಾಶಿಯಂಗೆ ಶಿಲಾನ್ಯಾಸ ಮಾಡಲಿದ್ದಾರೆ.

    ಕಾಪು ವಿಧಾನ ಸಭಾ ಕ್ಷೇತ್ರಕ್ಕೆ ಸಂಜೆ 4 ಗಂಟೆಗೆ ಭೇಟಿ ಮಾಡಲಿರುವ ಮುಖ್ಯಮಂತ್ರಿಗಳು, ಕಾಪು ಕ್ಷೇತ್ರದಲ್ಲಿ ಅನುಷ್ಟಾನಗೊಳ್ಳಲಿರುವ 445 ಕೋಟಿ ರೂ ವೆಚ್ಚದ ನಾನಾ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಮಾಡಲಿದ್ದಾರೆ.

    ಸಿಎಂ ಬಂಗ್ಲೆ ಮೈದಾನ ಬಳಿ 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಕಾಪು ಪುರಸಭೆಯ ಕಟ್ಟಡ ಉದ್ಘಾಟನೆ, 400 ಕೋಟಿ ರೂ ವೆಚ್ಚದಲ್ಲಿ ಬೆಳಪುವಿನಲ್ಲಿ ನಿರ್ಮಾಣವಾಗುವ ವಿಜ್ಞಾನ ಸಂಶೋಧನಾ ಕೇಂದ್ರದ ಕಾಮಗಾರಿಗೆ ಚಾಲನೆ , 10 ಕೋಟಿ ರೂ ವೆಚ್ಚದ ಕೈಗಾರಿಕಾ ವಲಯ, ಸರಕಾರಿ ಪಾಲಿಟೆಕ್ನಿಕ್, ಎಲ್ಲೂರಿನಲ್ಲಿ ನಿರ್ಮಾಣವಾಗಲಿರುವ ಘನತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಪುರಸಭೆ ವ್ಯಾಪ್ತಿಯ ಕೊಳಚೆ ನೀರಿನ ಶುದ್ಧೀಕರಣ ಘಟಕಕ್ಕೆ ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ನಾನಾ ಇಲಾಖೆಗಳಿಂದ ಸವಲತ್ತು ವಿತರಣೆ ಮಾಡಲಿದ್ದಾರೆ. ಇಲ್ಲಿ ಸುಮಾರು 10 ಸಾವಿರ ಜನರು ಸಮಾರಂಭದಲ್ಲಿ ಪಾಲ್ಗೊಳ್ಳವರು.

    Share Information
    Advertisement
    Click to comment

    Leave a Reply

    Your email address will not be published. Required fields are marked *