LATEST NEWS
21 ದಿನಗಳ ಹಿಂದೆ 30 ರೂಪಾಯಿಗೆ ಇಳಿದಿದ್ದ ಕೋಳಿ ಮಾಂಸ ದರ ಈಗ 200 ರ ಗಡಿಯಲ್ಲಿ
21 ದಿನಗಳ ಹಿಂದೆ 30 ರೂಪಾಯಿಗೆ ಇಳಿದಿದ್ದ ಕೋಳಿ ಮಾಂಸದರ ಈಗ 200 ರ ಗಡಿಯಲ್ಲಿ
ಮಂಗಳೂರು ಎಪ್ರಿಲ್ 14: ಹಕ್ಕಿ ಜ್ವರದಿಂದ ನೆಲಕಚ್ಚಿದ್ದ ಕೋಳಿ ಮಾಂಸ ಉದ್ಯಮ ಕೊರೊನಾ ಲಾಕ್ ಡೌನ್ ನಂತರ ಮತ್ತೆ ಚಿಗುರಿಕೊಂಡಿದ್ದು, ಈಗ ಕೋಳಿ ಮಾಂಸದ ದರ 200ರ ಗಡಿ ದಾಟಿದೆ. ಲಾಕ್ ಡೌನ್ ಘೋಷಣೆಯಾದ ನಂತರ ಒಂದೇ ಸಮನೆ ಏರಿಕೆ ಹಾದಿಯಲ್ಲಿ ಕೊಳಿ ಮಾಂಸದ ದರ ಇತ್ತು, ಈ ನಡುವೆ ಶನಿವಾರ ಕೆ.ಜಿ ಗೆ 130 ರೂ ಇದ್ದು ಈಗ ಏಕಾಏಕಿ 190 ರೂಪಾಯಿಗೆ ತಲುಪಿದೆ.
ಕಳೆದೊಂದು ವಾರದಿಂದ ಕೋಳಿ ಮಾಂಸ ದರದಲ್ಲಿ ಏರಿಕೆಯಾಗುತ್ತಿದೆ. ಮಂಗಳೂರಿನಲ್ಲಿ ಶನಿವಾರ ಕೆ.ಜಿ.ಗೆ 130 ರೂ. ಇದ್ದ ದರ ಭಾನುವಾರ ಏಕಾಏಕಿ 190ಕ್ಕೆ ತಲುಪಿದೆ. ಸೋಮವಾರ ಕೋಳಿ ದರ ವಿದ್ ಸ್ಕಿನ್ ಕೆ.ಜಿ.ಗೆ 190 ರೂ., ವಿದೌಟ್ ಸ್ಕಿನ್ 220 ರೂ. ದರದಲ್ಲಿ ಮಾರಾಟವಾಗಿದೆ. ಕೋಳಿ ಮಾಂಸಕ್ಕೆ ಮತ್ತೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಟೈಸನ್ ಕೋಳಿ ಪೂರೈಕೆ ಬಹುತೇಕ ಕಡಿಮೆಯಾಗಿದೆ
ಕೋಳಿಗೆ ಸಾಮಾನ್ಯವಾಗಿ ವಾರಾಂತ್ಯದಲ್ಲಿ ಮಾತ್ರ ಹೆಚ್ಚಿನ ಬೇಡಿಕೆ ಇರುತಿತ್ತು, ಆದರೆ ಈಗ ಪ್ರತಿ ದಿನವೂ ಬೇಡಿಕೆ ಬರುತ್ತಿದೆ. ಸಣ್ಣ ಅಂಗಡಿಗಳಲ್ಲಿ ಮಧ್ಯಾಹ್ನದೊಳಗೆ ಸ್ಟಾಕ್ ಖಾಲಿಯಾಗುತ್ತಿದೆ. ಬೇಡಿಕೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಏಪ್ರಿಲ್-ಮೇ ತಿಂಗಳಲ್ಲಿ ಭೂತ ಕೋಲಗಳು ನಡಯುವುದರಿಂದ ಪ್ರತಿವರ್ಷ ಈ ಅವಧಿಯಲ್ಲಿ ದರ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ಪೂರೈಕೆ ಕಡಿಮೆಯಾಗಿ ದರ ಏರಿಕೆಯಾಗಿದೆ.
ಆದರೆ ಕರೊನಾ ಹಾವಳಿ ಆರಂಭವಾಗುತ್ತಿದ್ದಂತೆ ರಾಜ್ಯ ಮೈಸೂರು ಸೇರಿದಂತೆ ಕೇರಳದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರದಿಂದಾಗಿ ಕೋಳಿ ಮಾಂಸದ ದರ ಹಠಾತ್ ಇಳಿಕೆಯಾಗಿತ್ತು. ಜಿಲ್ಲೆಯ ಕೆಲವು ಕಡೆಗಳಲ್ಲಿ ಕೆ.ಜಿ. ಕೋಳಿ ದರ 30 ರೂ. ವರೆಗೂ ತಲುಪಿತ್ತು. ದರ ಇಳಿಕೆಯಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿ ಫಾರ್ಮ್ ಹೊಂದಿರುವವರು ಉಚಿತವಾಗಿ ಕೋಳಿಗಳನ್ನು ವಿತರಿಸಿದ ಉದಾಹರಣೆಗಳು ಇತ್ತು.