LATEST NEWS
ಸಂಕಷ್ಟಕ್ಕೆ ಸ್ಪಂದಿಸಿದ ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು

ಉಡುಪಿ: ಪ್ರಸ್ತುತ ಕೊರೋನ ಮಹಾಮಾರಿಯಿಂದಾಗಿ ಜನರು ಕೈ – ಬಾಯಿ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಊರಿನಲ್ಲಿ ಎಲ್ಲಿಯಾದರೂ ಕೊರೋನ ಪಾಸಿಟಿವ್ ಎಂದು ತಿಳಿದು ಬಂದರೆ ಆ ಮನೆಯವರಿಗೆ ನೆರವಾಗುವುದು ಬಿಡಿ. ನೆರಮನೆಯವರು ನೇರವಾಗಿ ಮಾತನಾಡುವುದನ್ನು ತಪ್ಪಿಸಿಕೊಂಡು ಓಡಾಡುತ್ತಾರೆ. ಹಾಗಿರುವಾಗ ಕೊರೋನದಿಂದ ಮೃತಪಟ್ಟಿರುವ ಶವವನ್ನು ಜನಪ್ರತಿನಿಧಿಯೊಬ್ಬರು ತಾವೇ ಸ್ವತಃ P. P. E. ಕಿಟ್ ಹಾಕಿಕೊಂಡು ದಹನಮಾಡಿದ ಘಟನೆ ನಡದಿದೆ.
ಚೇರ್ಕಾಡಿ ಗ್ರಾಮದ ನಿವಾಸಿ, ಅಶೋಕ ಆಚಾರ್ಯ ಎಂಬವರು ಕೊರೋನ ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ. ಕೊರೋನ ವಾರಿಯರ್ಸ್ ಶವವನ್ನು ತಂದು ಸ್ಮಶಾನಕ್ಕೆ ಮುಟ್ಟಿಸಿದರು.

ಮೃತರ ಮನೆಯಲ್ಲಿ ಗಂಡಸರು ಇಲ್ಲದನ್ನು ಮನಗಂಡ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಯುತ ಹರೀಶ್ ಶೆಟ್ಟಿಯವರು ಸ್ವತಃ P. P. E. ಕಿಟ್ ತರಿಸಿ, ಹಾಕಿಕೊಂಡು ಸಂಪೂರ್ಣ ದಹನ ಕಾರ್ಯ ನಡೆಸಿಕೊಟ್ಟರು. ಇದನ್ನು ನೋಡಿದ ಸ್ಥಳೀಯ, ಮತ್ತು ಬ್ರಹ್ಮಾವರ ಹಾಗೂ ಬಾರ್ಕೂರು ವಿಶ್ವಕರ್ಮ ಸಮಾಜ ಮಾನ್ಯ ಪಂಚಾಯತ್ ಅಧ್ಯಕ್ಷರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.