LATEST NEWS
ಈಜುಕೊಳಕ್ಕೆ ಕೆಮಿಕಲ್ ಮಿಶ್ರಣ – ಮೂರು ವಿಧ್ಯಾರ್ಥಿಗಳು ಅಸ್ವಸ್ಥ
ಈಜುಕೊಳಕ್ಕೆ ಕೆಮಿಕಲ್ ಮಿಶ್ರಣ – ಮೂರು ವಿಧ್ಯಾರ್ಥಿಗಳು ಅಸ್ವಸ್ಥ
ಮಂಗಳೂರು ಸೆಪ್ಟೆಂಬರ್ 26: ಮಂಗಳೂರಿನ ಅಲೋಶಿಯಸ್ ಕಾಲೇಜಿನ ಸ್ವಿಮ್ಮಿಂಗ್ ಪೂಲ್ ಸ್ವಿಮ್ಮಿಂಗ್ ತರಬೇತಿ ಪಡೆಯುತ್ತಿದ್ದ ಮೂವರು ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ.
ಮಂಗಳೂರಿನ ಅಲೋಶಿಯಸ್ ಕಾಲೇಜಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ನೀರಿಗೆ ನೀರನ್ನು ಶುದ್ದೀಕರಿಸುವ ಕೆಮಿಕಲ್ ಬಳಕೆ ಹೆಚ್ಚಿದ ಕಾರಣ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇಲ್ಲಿ 70 ಕ್ಕೂ ಅಧಿಕ ಮಕ್ಕಳು ಈಜು ಕಲಿಯುತ್ತಿದ್ದು, ಅವರಿಗೆ ರಾತ್ರಿ 9:45 ರ ವರೆಗೆ ಈಜು ಕಲಿಯಲು ಅವಕಾಶ ನೀಡಲಾಗಿತ್ತು. ಆದರೆ, ಸಿಬ್ಬಂದಿ ಮಕ್ಕಳು ಈಜುತ್ತಿದ್ದ ಸಂದರ್ಭದಲ್ಲಿಯೆ 9.30 ಕ್ಕೆ ಈಜುಕೊಳವನ್ನು ಸ್ವಚ್ಛಮಾಡುವ ಕೆಮಿಕಲ್ ಅನ್ನು ಪಂಪ್ ಮಾಡಿದ ಪರಿಣಾಮ ಈಜುತ್ತಿದ್ದ ಮಕ್ಕಳಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಮೂವರು ಮಕ್ಕಳು ಅಸ್ವಸ್ಥರಾಗಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.