DAKSHINA KANNADA
ಮುಳುಗು ಸೇತುವೆ ಖ್ಯಾತಿಯ ಚೆಲ್ಯಡ್ಕ ಸೇತುವೆ ಸಂಪೂರ್ಣ ಮುಳುಗಡೆ….!!
ಪುತ್ತೂರು ಜುಲೈ 06 : ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಈ ವರ್ಷದಲ್ಲಿ ಮೊದಲ ಬಾರಿಗೆ ಪುತ್ತೂರು- ಪಾಣಾಜೆ ಸಂಪರ್ಕದ ಚೆಲ್ಯಡ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
ಪ್ರತಿವರ್ಷ ಮಳೆಗಾಲದಲ್ಲಿ ಈ ಸೇತುವೆ ನಾಲ್ಕೈದು ಬಾರಿ ಮುಳುಗಡೆಯಾಗುತ್ತಿದ್ದು, ಈ ವರ್ಷದ ಮಳೆಗೆ ಗುರುವಾರ ಮುಂಜಾನೆ ಮೊದಲ ಬಾರಿಗೆ ಮುಳುಗಡೆಯಾಗಿದೆ. ಈ ಭಾಗದಲ್ಲಿ ಸಂಚರಿಸುವ ವಾಹನಗಳು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಸಂಟ್ಯಾರ್ ನಲ್ಲಿ ತಿರುವು ಪಡೆದುಕೊಂಡು ರೆಂಜ ಮೂಲಕ ಸುತ್ತು ಬಳಸಿ ಸಾಗುತ್ತಿದೆ.
ಮುಳುಗು ಸೇತುವೆ ಎಂದೇ ಕರೆಯಲ್ಪಡುವ ಚೆಲ್ಯಡ್ಕ ಸೇತುವೆಯು ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಇಲ್ಲಿ ಸಮರ್ಪಕ ಮೇಲ್ಸೇತುವೆ ನಿರ್ಮಿಸುವಂತೆ ಇಲ್ಲಿನ ಜನರು ಹಲವಾರು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಈಡೇರಿಕೆಯಾಗಿಲ್ಲ ಎಂಬ ಆರೋಪ ಈ ಭಾಗದ ಜನರಿಂದ ಕೇಳಿಬರುತ್ತಿದೆ.