BELTHANGADI
ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಪೊಲೀಸ್ ಠಾಣೆ ಮೆಟ್ಟಿಲೇರಿದ ಹುಡುಗಿ

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಪೊಲೀಸ್ ಠಾಣೆ ಮೆಟ್ಟಿಲೇರಿದ ಹುಡುಗಿ
ಬೆಳ್ತಂಗಡಿ ಜೂನ್ 27: ಯೋಧನೊಬ್ಬ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕೊಡಗು ಜಿಲ್ಲೆಯ ಮೈತಾಡಿ ನಿವಾಸಿ ಸ್ವಪ್ನ ಪದ್ಮಿನಿ ತನ್ನ ಪ್ರಿಯಕರ ಕಗ್ಗೊಡು ನಿವಾಸಿ ಭುವನ್ ಎಂಬಾತನ ಮೇಲೆ ದೂರು ನೀಡಿದ್ದಾಳೆ.
ಭುವನ್ ಹಾಗೂ ಪದ್ಮಿನಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ಭವನ್ ಪದ್ಮಿನಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಂದು ಭುವನ ಮದುವೆ ಧರ್ಮಸ್ಥಳದ ಶಿವಪಾರ್ವತಿ ಸಭಾಂಗಣದಲ್ಲಿ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಮದುವೆಗೆ ಮುಂಚೆಯೆ ಯುವತಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಭುವನ್ ಕಳೆದ ಒಂದು ವರ್ಷದಿಂದ ದೈಹಿಕವಾಗಿ ಬಳಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿರುವ ಪದ್ಮಿನಿ ಭುವನ್ ವಿರುದ್ಧ ವಿರಾಜಪೇಟೆ ಪೋಲೀಸ್ ಠಾಣೆಗೆ ಈ ಹಿಂದೆಯೇ ದೂರು ನೀಡಿದ್ದಾಳೆ. ಪ್ರಕರಣ ನ್ಯಾಯಾಲಯದ ಮುಂದಿದ್ದರೂ ಮದುವೆಯಾಗುತ್ತಿರುವ ಆರೋಪಿಸಿ ಇಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.