Connect with us

    DAKSHINA KANNADA

    ಹೆಸರಾಂತ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಯ ವೈಭವ

    ಸುಳ್ಯ ಡಿಸೆಂಬರ್ 09: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಯ ವೈಭವ ಮೇಳೈಸಿದೆ..ಚಂಪಾಷಷ್ಠಿ ಯ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಬ್ರಹ್ಮರಥದಲ್ಲಿ ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ್ದಾನೆ..


    ದಕ್ಷಿಣ ಭಾರತದ ಪರಮ ಪವಿತ್ರ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವರ್ಷದ ಅದ್ಭುತ ಸನ್ನಿವೇಶಕ್ಕೆ ಮತ್ತೆ ಸಾಕ್ಷಿಯಾಗಿದೆ..ಮುಂಜಾವು ಬೆಳಕು ಹರಿಯುವ ಸಂಧರ್ಭದಲ್ಲಿ ದೇವಳದ ಮುಂಭಾಗದಲ್ಲಿರುವ ಬ್ರಹ್ಮರಥವನ್ನೇರಿದ ಸುಬ್ರಹ್ಮಣ್ಯ ಲಕ್ಷಾಂತರ ಜನರಿಗೆ ದರುಶನ ಭಾಗ್ಯ ನೀಡಿದ್ದಾನೆ..ಈ ದಿನ ಚಂಪಾಷಷ್ಠಿ ಹಿನ್ನಲೆ ಪ್ರಾತಃ ಕಾಲ 6.58ರ ಹೊತ್ತಿನ ವೃಶ್ಚಿಕ ಲಗ್ನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥದ ಮೇಲೆ ವಿರಾಜಮಾನರಾಗಿ ನೆರೆದ ಭಕ್ತ ಸಮೂಹಕ್ಕೆ ದರ್ಶನ ನೀಡಿದ್ದಾನೆ..ಇದಕ್ಕೂ ಮುನ್ನ ದೇಗುಲದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದಿದೆ..

    ಮೊದಲು ಸುಬ್ರಹ್ಮಣ್ಯ ನ ಹೂವಿನ ತೇರು ರಥಬೀದಿಯಲ್ಲಿ ಮುಂದೆ ಸಾಗಿದರೆ ಬಳಿಕ ಸುಬ್ರಹ್ಮಣ್ಯ ನನ್ನು ಹೊತ್ತ ಬ್ರಹ್ಮ ರಥ ಸಾಗಿದೆ..ಬ್ರಹ್ಮರಥವನ್ನು ಎಳೆಯಲು ಮೊದಲೇ ಸೇವೆಯನ್ನು ಬುಕ್ಕಿಂಗ್ ಮಾಡಿದವರಿಗಷ್ಟೇ ಅವಕಾಶ ನೀಡಲಾಗಿತ್ತು.. ಲಕ್ಷಾಂತರ ಮಂದಿ ರಸ್ತೆಯ ಇಕ್ಕೆಲಗಳಲ್ಲಿ,ಕಟ್ಟಡಗಳ ಮೇಲೇರಿ ಕುಕ್ಕೆ ಸುಬ್ರಹ್ಮಣ್ಯ ನ ದರ್ಶನ ಮಾಡಿದ್ದಾರೆ.

    ಬ್ರಹ್ಮ ರಥ ಸಾಗುತ್ತಿರುವಾಗ ತೇರಿಗೆ ಎಳ್ಳು,ನಾಣ್ಯಗಳನ್ನು ಎಸೆದು ಹರಕೆ ತೀರಿಸಿಕೊಂಡಿದ್ದಾರೆ..ತೇರು ಸಂಪೂರ್ಣ ವಾದ ಬಳಿಕ ರಥದಲ್ಲಿ ಅಳವಡಿಸಲಾಗಿದ್ದ ಹಿಂಗಾರ,ಫಲಪುಷ್ಪಗಳನ್ನು ಅರ್ಚಕರು ಭಕ್ತರತ್ತ ವೃಷ್ಟಿ ಮಾಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *