FILM
ವಿಡಿಯೋ ಮೂಲಕ ತನ್ನ ಹುಡುಗನ ಪರಿಚಯ ಮಾಡಿದ ಚೈತ್ರಾ ಕುಂದಾಪುರ

ಕುಂದಾಪುರ, ಮೇ 09: ಮಾಜಿ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಹಸೆಮಣೆ ಏರಲಿ ಸಜ್ಜಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮದುವೆಗೆ ತಯಾರಿ ನಡೆದಿದೆ. ಇಷ್ಟು ದಿನಗಳ ಕಾಲ ಚೈತ್ರಾ ಕುಂದಾಪುರ ಅವರು ವರನ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈಗ ಹೊಸದೊಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.
ಶ್ರೀಕಾಂತ್ ಕಶ್ಯಪ್ ಜೊತೆ ಚೈತ್ರಾ ಕುಂದಾಪುರ ಮದುವೆ ನೆರವೇರಲಿದೆ. ಪ್ರೀ-ವೆಡ್ಡಿಂಗ್ ವಿಡಿಯೋವನ್ನು ಚೈತ್ರಾ ಕುಂದಾಪುರ ಅವರ ಹಂಚಿಕೊಂಡಿದ್ದಾರೆ. ಅದಕ್ಕೆ ಕಮೆಂಟ್ ಮಾಡಿದ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11’ ಶೋಗೆ ಬಂದ ಬಳಿಕ ಚೈತ್ರಾ ಕುಂದಾಪುರ ಅವರ ಖ್ಯಾತಿ ಹೆಚ್ಚಿತು. ನಂತರ ಅವರು ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲೂ ಕಾಣಿಸಿಕೊಂಡರು. ಬಿಗ್ ಬಾಸ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅವರು ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಈಗ ಚೈತ್ರಾ ಕುಂದಾಪುರ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
‘ಇದು ಬಹಿರಂಗಪಡಿಸುವ ಸಮಯ. ಬದುಕಿನ ಸಂಕಷ್ಟದಿಂದ ಸಂಭ್ರಮದವರೆಗೂ ಜೊತೆ ನಿಂತ ಜೀವದೊಂದಿಗೆ ಸಪ್ತಪದಿ ಇಡುವ ಸಮಯ ಬಂದಿದೆ. ನಿಮ್ಮೆಲ್ಲರ ಹಾರೈಕೆ ನಮ್ಮನ್ನು ಕಾಯಲಿ’ ಎಂಬ ಕ್ಯಾಪ್ಷನ್ನೊಂದಿಗೆ ಚೈತ್ರಾ ಕುಂದಾಪುರ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಸಂದರ್ಭದಲ್ಲಿ ಮದುವೆ ಬಗ್ಗೆ ಸುದೀಪ್ ಮಾತನಾಡಿದ್ದ ತುಣುಕು ಕೂಡ ಈ ವಿಡಿಯೋದಲ್ಲಿದೆ.
ಬಿಗ್ ಬಾಸ್ಗೆ ಬರುವಾಗಲೇ ಚೈತ್ರಾ ಕುಂದಾಪುರ ಅವರ ಮದುವೆ ಮಾತುಕಥೆ ನಡೆದಿತ್ತು. ‘ಈಗಾಗಲೇ ಮದುವೆ ಫಿಕ್ಸ್ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ’ ಎಂದು ಅವರು ಹೇಳಿದ್ದರು. ಆದರೆ ಹುಡುಗ ಯಾರು ಎಂಬುದನ್ನು ತಿಳಿಸಿರಲಿಲ್ಲ. ಈಗ ವಿಡಿಯೋ ಮೂಲಕ ಅವರು ಮಾಹಿತಿ ತಿಳಿಸಿದ್ದಾರೆ.