LATEST NEWS
ಮೆಹಂದಿ ಹಾಕಿ ಮದುವೆಗೆ ರೆಡಿ ಆದ ಚೈತ್ರಾ ಕುಂದಾಪುರ: ವರನ ಫೋಟೋ ನೋಡಲು ಅಭಿಮಾನಿಗಳ ಕಾತುರ

ಕುಂದಾಪುರ, ಮೇ 08: ಚೈತ್ರಾ ಕುಂದಾಪುರ ಅವರು ‘ಬಿಗ್ ಬಾಸ್’ ಮನೆಗೆ ಹೋದಾಗಲೇ ಮದುವೆ ಬಗ್ಗೆ ಮೌನ ಮುರಿದಿದ್ದರು. ‘ನನಗೆ ಈಗಾಗಲೇ ಹುಡುಗ ಫಿಕ್ಸ್ ಆಗಿದ್ದಾನೆ. ಬಿಗ್ ಬಾಸ್ನಿಂದ ಹೋದ ತಕ್ಷಣ ಮದುವೆ’ ಎಂದಿದ್ದರು. ಬಿಗ್ ಬಾಸ್ ಮುಗಿದು ಐದು ತಿಂಗಳ ಬಳಿಕ ಚೈತ್ರಾ ಕುಂದಾಪುರ ಅವರು ವಿವಾಹಕ್ಕೆ ಸಿದ್ಧರಾಗಿದ್ದಾರೆ. ಅವರು ಕೈಗೆ ಮೆಹಂದಿ ಹಾಕಿಕೊಂಡಿದ್ದಾರೆ.
ಶೀಘ್ರವೇ ಅವರ ವಿವಾಹ ಕಾರ್ಯ ನೆರವೇರುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಇದಕ್ಕೆ ಕಾರಣ ಆಗಿದ್ದು ಅವರ ಬಿಗ್ ಬಾಸ್ ಪ್ರಯಾಣ. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಲವ್ ಅಫೇರ್ ಇಟ್ಟುಕೊಂಡು ಸುದ್ದಿ ಆಗಲು ಅವರಿಗೆ ಇಷ್ಟ ಇರಲಿಲ್ಲ. ಹುಡುಗ ಫಿಕ್ಸ್ ಆಗಿದ್ದರಿಂದ ಈ ರೀತಿ ವಿಚಾರಗಳಿಗೆ ಕಿವಿ ಕೊಡದೇ ಇರಲು ಚೈತ್ರಾ ಕುಂದಾಪುರ ಅವರು ನಿರ್ಧರಿಸಿದ್ದರು. ಈಗ ಅವರು ವಿವಾಹ ಆಗುತ್ತಿದ್ದಾರೆ.

ಬಿಗ್ ಬಾಸ್ ಪೂರ್ಣಗೊಂಡ ಬಳಿಕವೇ ಚೈತ್ರಾ ವಿವಾಹ ಆಗುತ್ತಿದ್ದರೇನೋ. ಆದರೆ, ಆ ಸಮಯದಲ್ಲಿ ಅವರಿಗೆ ಬೇರೆ ಆಫರ್ ಬತು. ಅದುವೇ ‘ಬಾಯ್ಸ್ vs ಗರ್ಲ್ಸ್’. ಈ ರಿಯಾಲಿಟಿ ಶೋನಲ್ಲಿ ಚೈತ್ರಾ ಮಿಂಚಿದರು. ಇಲ್ಲಿಗೆ ಹೋದ ಬಳಿಕ ಅವರು ಗ್ಲಾಮರ್ ಗೊಂಬೆ ಆಗಿ ಬಿಟ್ಟರು. ಈಗ ಚೈತ್ರಾ ಕುಂದಾಪುರ ಅವರ ವಿವಾಹ ಆಗುವ ದಿನ ಸಮೀಪಿಸಿದೆ.
ಚೈತ್ರಾ ತಾವು ಯಾರನ್ನು ವಿವಾಹ ಆಗುತ್ತಿದ್ದೇನೆ ಎಂಬ ವಿಚಾರವನ್ನು ಈವರೆಗೆ ರಿವೀಲ್ ಮಾಡಿಲ್ಲ. ಅದನ್ನು ಗುಟ್ಟಾಗಿಯೇ ಇಟ್ಟಿದ್ದಾರೆ. ಈಗ ಅವರ ಮದುವೆ ಕಾರ್ಯ ನಡೆದರೆ ಆ ಬಳಿಕ ಹಂಚಿಕೊಳ್ಳೋ ಫೋಟೋದಿಂದ ಪತಿಯ ವಿಚಾರ ರಿವೀಲ್ ಆಗಲಿದೆ. ಚೈತ್ರಾ ಮದುವೆಗಾಗಿ ಫ್ಯಾನ್ಸ್ ಕಾದಿದ್ದಾರೆ.