ಮಂಗಳೂರು ನವೆಂಬರ್ 7: ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ರಸ್ತೆಯಲ್ಲಿ ಯುವತಿಯ ಸರ ಕಳವು ನಡೆಸಿದ ಆರೋಪಿಯನ್ನು ಮೂರೇ ಗಂಟೆಗಳಲ್ಲಿ ಎಸಿಪಿ ನೇತೃತ್ವದ ಉಳ್ಳಾಲ ಹಾಗೂ ಕೊಣಾಜೆ ಪೊಲೀಸರ ತಂಡ ದೇರಳಕಟ್ಟೆಯಿಂದ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳ ಮೂಲದ ಸುಲ್ತಾನ್ (28) ಎಂದು ಗುರುತಿಸಲಾಗಿದೆ. . ನಿನ್ನೆ ಸಂಜೆ ಕೆಲಸಬಮುಗಿಸಿ ಮನೆವಕಡೆಗೆ ತೆರಳುತ್ತಿದ್ದ ನಿಶಾ ಎಂಬವರ ಕುತ್ತಿಗೆಯಿಂದ ಒಂದು ಪವನ್ ಬೆಲೆಬಾಳುವ ಚಿನ್ನದ ಸರವನ್ನು ಬುಲೆಟ್ ಬೈಕಿನಲ್ಲಿ ಬಂದ ಆರೋಪಿ ಸುಲ್ತಾನ್ ಕಳವು ನಡೆಸಿದ್ದ. ಈತನ ಕಳವು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಅಲ್ಲಲ್ಲಿ ಬಂದೋಬಸ್ತ್ ನಡೆಸಿ ತಪಾಸಣೆ ಆರಂಭಿಸಿದ್ದರು. ಕೊಣಾಜೆ ಠಾಣಾ ಕ್ರೈಂ ತಂಡದ ಸಹಕಾರವನ್ನು ಪಡೆದು ತಪಾಸಣೆ ಆರಂಭಿಸಿದಾಗ ಸಿಸಿಟಿವಿಯಲ್ಲಿ ಸೆರೆಸಿಕ್ಕ ಬುಲೆಟ್ ಮತ್ತು ಆರೋಪಿಯ ಟೀಶಟ್೯ ಆಧಾರದಲ್ಲಿ, ಆರೋಪಿ ಬಾರ್ ಒಳಗಡೆ ಪ್ರವೇಶಿಸುತ್ತಿದ್ದಂತೆ ಸೆರೆ ಹಿಡಿದು ಬಂಧಿಸಿದ್ದಾರೆ. ಯುವತಿ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದ ಸಂದರ್ಭದಲ್ಲೇ ಆರೋಪಿಯನ್ನು ಸೆರೆ ಹಿಡಿದ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.