Connect with us

    LATEST NEWS

    ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಕ್ಯಾಂಪಸ್ ಪ್ರಂಟ್ ನಿಂದ ರಸ್ತೆ ತಡೆ… ಪೊಲೀಸರಿಂದ ಲಾಠಿಚಾರ್ಜ್

    ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಕ್ಯಾಂಪಸ್ ಪ್ರಂಟ್ ನಿಂದ ರಸ್ತೆ ತಡೆ… ಪೊಲೀಸರಿಂದ ಲಾಠಿಚಾರ್ಜ್

    ಮಂಗಳೂರು ಡಿಸೆಂಬರ್ 16: ಕೇಂದ್ರ ಸರಕಾರದ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆ ಜಾರಿ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆ. ಈ ಸಂದರ್ಭದಲ್ಲಿ ಅನುಮತಿ ಪಡೆಯದೆ ರಸ್ತೆ ತಡೆ ನಡೆಸಲು ಮುಂದಾದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

    ಪೌರತ್ವ ಕಾಯ್ದೆಯನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಮಂಗಳೂರಿನ ಬಲ್ಮಠ ವೃತ್ತದ ಬಳಿ ಪ್ರತಿಭಟನಾ ಮೆರವಣಿಗೆ ನಡೆಸಿಲಾಯಿತು. ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಹಿನ್ನಲೆ ಪ್ರತಿಭಟನಾಕಾರರನ್ನು ಪೋಲೀಸರು ಅರ್ಧದಲ್ಲೇ ತಡೆದಿದ್ದು, ದಿಢೀರ್ ಪ್ರತಿಭಟನೆಯಿಂದಾಗಿ ಮಂಗಳೂರು ನಗರದ ತುಂಬಾ ಟ್ರಾಫಿಕ್ ಜಾಮ್ ಏರ್ಪಟ್ಟಿತ್ತು. ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲು ಹೊರಟ ಪ್ರತಿಭಟನಾಕಾರರನ್ನು ಪೋಲೀಸರು ಲಘು ಲಾಠೀಚಾರ್ಚ್ ಮಾಡುವ ಮೂಲಕ‌ ಚದುರಿಸಿದರಲ್ಲದೆ, ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ಪ್ರತಿಭಟನಾಕಾರರನ್ನು ಬಂಧಿಸುವ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಸಂಘಟನೆಗೆ ಸೇರಿದ ಕೆಲವು ಕಾರ್ಯಕರ್ತರು ಪೋಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ದೃಶ್ಯಗಳನ್ನು ತಮ್ಮ ಮೊಬೈಲ್ ಗಳ ಮೂಲಕ ಚಿತ್ರೀಕರಿಸುತ್ತಿದ್ದರು. ಪೋಲೀಸರ ಕ್ರಮಕ್ಕೆ ವಿರೋಧವನ್ನೂ ವ್ಯಕ್ತಪಡಿಸುತ್ತಿದ್ದರು. ಕೇವಲ ಚಿತ್ರೀಕರಣಕ್ಕೆ ಮಾತ್ರವೇ ಈ ವ್ಯಕ್ತಿಗಳನ್ನು ಪ್ರತಿಭಟನಾಕಾರರು ನಿಯೋಜಿಸಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *