MANGALORE
ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ..!

ಇತಿಹಾಸ ಪ್ರಸಿದ್ಧ ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರದಲ್ಲಿ ವರ್ಷಂಪ್ರತಿಯಂತೆ ಆಚರಿಸುತ್ತಿರುವ ಶ್ರೀಕೃಷ್ಣ ಜನ್ಮಾಷ್ಟಮಿಯ ಉತ್ಸವವನ್ನು ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆಪ್ಟೆಂಬರ್ 6 ರ ಬುಧವಾರದಂದು ಅದ್ದೂರಿಯಾಗಿ ಆಚರಿಸಲಾಯಿತು.
ಮಂಗಳೂರು : ಇತಿಹಾಸ ಪ್ರಸಿದ್ಧ ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರದಲ್ಲಿ ವರ್ಷಂಪ್ರತಿಯಂತೆ ಆಚರಿಸುತ್ತಿರುವ ಶ್ರೀಕೃಷ್ಣ ಜನ್ಮಾಷ್ಟಮಿಯ ಉತ್ಸವವನ್ನು ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆಪ್ಟೆಂಬರ್ 6 ರ ಬುಧವಾರದಂದು ಅದ್ದೂರಿಯಾಗಿ ಆಚರಿಸಲಾಯಿತು.

ಮಧ್ಯಾಹ್ನ 3.00ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಸಿ, ಶ್ರೀ ಗಣೇಶ್ ಜನರಲ್ ಸ್ಟೋರ್, ಕುಲಶೇಖರದ ಮಾಲಕರಾದ ಶ್ರೀಮತಿ ಮತ್ತು ಶ್ರೀ ಜಯಪ್ರಕಾಶ್.ಕೆ ರವರು ದೀಪ ಪ್ರಜ್ವಲನೆ ಮಾಡಿದರು.
ನಂತರ ಶ್ರೀ ಕೃಷ್ಣ ವೇಷ ಸ್ಪರ್ಧೆಯು ಕಂದ ಕೃಷ್ಣ, ಮುದ್ದು ಕೃಷ್ಣ ಹಾಗೂ ಬಾಲಕೃಷ್ಣ ಎಂಬ 3 ವಿಭಾಗದಲ್ಲಿ ನಡೆಯಿತು, ಸುಮಾರು 140ಕ್ಕೂ ಮಿಕ್ಕಿದ ಪುಟಾಣಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಹಾಗೆಯೇ ಮಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆಯು ಕೂಡಾ ನಡೆಯಿತು.
ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಡಾ. ಯತೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಹರೀಶ್ ಶೆಟ್ಟಿ, ದಯಾನಂದ ಅಡ್ಯಾರ್, ಆನಂದ ಉರ್ವಾ, ಹೆಚ್.ಎಸ್. ಸುಂದರ ಆಚಾರ್ಯ ಬೆಳುವಾಯಿ, ಕೆ. ಲೋಕೇಶ್ ಶೆಟ್ಟಿ, ಶಿವರಾಮ ಮಣಿಯಾಣಿ. ಎಂ, ಜ್ಯೋತಿಷ್ ಕುಮಾರ್, ಬಿ. ಪ್ರೆಮಾನಂದ ಕುಲಾಲ್ ಕೋಡಿಕಲ್, ದಾಮೋದರ್. ಎ, ಪುರುಷೋತ್ತಮ್ ಕುಲಾಲ್ ಕಲ್ಬಾವಿ, ಮಯೂರ್ ಉಳ್ಳಾಲ್, ಗೀತಾ ಮನೋಜ್ ಮರೋಳಿ, ಕೆ. ಸುಂದರ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂದೇಶ್ ಬಜ್ಪೆ ಕಾರ್ಯಕ್ರಮವನ್ನು ನಿರೂಪಿಸಿದರು.
ಕುಮಾರಿ ರಕ್ಷಾ ಪ್ರಾರ್ಥಿಸಿದರು. ವಿಶ್ವನಾಥ್. ಟಿ ಸ್ವಾಗತಿಸಿದರು. ಪ್ರಜ್ವಲ್ ಶಕ್ತಿನಗರ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ರವೀಂದ್ರ ಮುನ್ನಿಪ್ಪಾಡಿ ವಂದಿಸಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸಿದ ಭಕ್ತಿಗೀತೆ, ರಂಗೋಲಿ, ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ, ಹೂ ಕಟ್ಟುವ ಸ್ಪರ್ಧೆ, ಕೃಷ್ಣ ವೇಷ ಸ್ಪರ್ಧೆಯಲ್ಲಿ ವಿಜೇತರದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಯೂರಿ ನಾಟ್ಯಾಲಯ, ಮಂಗಳೂರಿನ ನಾಟ್ಯವಿದುಷಿ ಸುಮಾ ದಾಮೋದರ್ ರವರ ಶಿಷ್ಯ ವೃಂದದವರಿಂದ “ನೃತ್ಯ ವೈಭವ” ಮತ್ತು ಶ್ರೀಮತಿ ಶಶಿಕಲಾ ಸತೀಶ್ ಕುಲಾಲ್ ಮಂಜನಾಡಿಯವರ ನಿರ್ದೇಶನದಲ್ಲಿ ನಾಟ್ಯ ಆರಾಧನಾ ನೃತ್ಯ ಕಲಾ ತಂಡ, ಮುಡಿಪುರವರ ಶಿಷ್ಯ ವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ದೇವಳದಲ್ಲಿ ಶ್ರೀ ವೀರನಾರಾಯಣ ಭಜನಾ ಮಂಡಳಿ ಹಾಗೂ ಮಾತೃ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆದು, ರಾತ್ರಿ 11.30 ಕ್ಕೆ ಶ್ರೀದೇವರಿಗೆ ಮಹಾಪೂಜೆ, ನಂತರ ಶ್ರೀ ದೇವರಿಗೆ ಅರ್ಘ್ಯ ಪ್ರಧಾನ ಪೂಜೆ ನಡೆಯಿತು.
ಈ ಸಂಧರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿ , ಸೇವಾ ಸಮಿತಿ, ಮಹಿಳಾ ಮಂಡಳಿ, ಸೇವಾ ಟ್ರಸ್ಟ್, ಜೀರ್ಣೋದ್ದಾರ ಸಮಿತಿಯ ಪ್ರಮುಖರು ಹಾಗೂ ಸರ್ವ ಭಕ್ತಾಧಿಗಳು ಉಪಸ್ಥಿತರಿದ್ದರು. ನಂತರ ಸಾಮೂಹಿಕ ಫಲಹಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.