LATEST NEWS
ಹೋಮ್ ಸ್ಟೇ ಕಟ್ಟಡದಲ್ಲಿ ಅಂದರ್ ಬಾಹರ್ ಜೂಜು 21 ಮಂದಿ ವಶಕ್ಕೆ

ಹೋಮ್ ಸ್ಟೇ ಕಟ್ಟಡದಲ್ಲಿ ಅಂದರ್ ಬಾಹರ್ ಜೂಜು 21 ಮಂದಿ ವಶಕ್ಕೆ
ಮಂಗಳೂರು ಜನವರಿ 14: ಹೋಮ್ ಸ್ಟೇ ಕಟ್ಟಡದಲ್ಲಿ ಅಂದರ್ ಬಾಹರ್ ಜೂಜು ಆಟ ಆಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು ಅಂದಾಜು 86 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರದ ಅಡ್ಯಾರ್ ಗ್ರಾಮದ ಸುರೇಶ್ ಶೆಟ್ಟಿ ಎಂಬವರು ಮಾಲಿಕತ್ವದ ಅಡ್ಯಾರ್ ಹಿಲ್ಸ್ ಎಂಬ ಹೋಮ್ ಸ್ಟೇ ಕಟ್ಟಡದಲ್ಲಿ ಅಂದರ್ ಬಾಹರ್ ಎಂಬ ಜೂಜು ಆಟ ಆಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಸಿಸಿಬಿ ಪಿಎಸ್ಐ ಕಬ್ಬಲ್ ರಾಜ್ ಮತ್ತು ಅವರ ತಂಡ ಸ್ಥಳಕ್ಕೆ ದಾಳಿ ನಡೆಸಿ ಜುಗಾರಿ ಆಟ ಅಡುತ್ತಿದ್ದ 21 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ದಾಳಿ ಸಮಯದಲ್ಲಿ ಜೂಜು ಆಟಕ್ಕೆ ಉಪಯೋಗಿಸಿದ ನಗದು ಹಣ ರೂ 18,37,000/-, (ಹದಿನೆಂಟು ಲಕ್ಷದ ಮೂವತ್ತೇಳು ಸಾವಿರ) ಹಾಗೂ 08 ಕಾರು ಮತ್ತು 1 ಅಟೋ ರಿಕ್ಷಾ ಮೌಲ್ಯ ರೂ 66,75,000/- ಮತ್ತು ಮೊಬೈಲ್ ಸೆಟ್-24 ಮೌಲ್ಯ ರೂ 1,35,700/- ಗಳನ್ನು ಸ್ವಾಧಿನಪಡಿಸಿಕೊಂಡಿದ್ದು ಸ್ವಾಧಿನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 86,47,700/- ಆಗಿರುತ್ತದೆ.
ಈ ಸಂದರ್ಭ ಹೊಮ್ ಸ್ಟೇ ಮಾಲಕ ಸುರೇಶ್ ಶೆಟ್ಟಿ ರವರು ಪರಾರಿಯಾಗಿರುತ್ತಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಆರೋಪಿಗಳನ್ನು ಹಾಗೂ ಸೊತ್ತುಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.