DAKSHINA KANNADA
ಕೊರೊನಾ ಸೋಂಕಿತನ ವಿರುದ್ಧ ಪೋಲೀಸ್ ಪ್ರಕರಣ ದಾಖಲು

ಕೊರೊನಾ ಸೋಂಕಿತನ ವಿರುದ್ಧ ಪೋಲೀಸ್ ಪ್ರಕರಣ ದಾಖಲು
ಪುತ್ತೂರು, ಮಾರ್ಚ್ 30: ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊರೊನಾ ಪೀಡಿತ ಯುವಕನ ವಿರುದ್ಧ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್ ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ನೀಡಿದ್ದು, ಯುವಕನ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾರ್ಚ್ 21 ರಂದು ಬೆಳ್ತಂಗಡಿಯ ಕರಾಯ ನಿವಾಸಿಯಾಗಿರುವ ಯುವಕ ಸೌದಿಯಿಂದ ಊರಿಗೆ ಬಂದಿದ್ದ. ಈ ಸಂದರ್ಭದಲ್ಲಿ ಈತನಿಗೆ ಕಡ್ಡಾಯವಾಗಿ ಹೋಂ ಕ್ವಾರೆಂಟೈನ್ ನಲ್ಲಿ ಇರಲು ಅಧಿಕಾರಿಗಳು ಸೂಚಿಸಿದ್ದರು.
ಆದರೆ ಈತ ಅಧಿಕಾರಿಗಳ ಸೂಚನೆಯನ್ನು ಮೀರಿ ಊರಿಡೀ ತಿರುಗಾಡಿದ್ದ. ಕಳೆದ ಎರದು ದಿನಗಳ ಹಿಂದೆ ಈತನಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾದ ಹಿನ್ನಲೆಯಲ್ಲಿ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತನಿಗೆ ಹೋಂ ಕ್ವಾರೆಂಟೈನ್ ನಲ್ಲಿರಲು ಸೂಚಿಸಿದ್ದರೂ, ಸೂಚನೆಯನ್ನು ಧಿಕ್ಕರಿಸಿ ಇಡೀ ಊರಿನ ಜನರಿಗೆ ಆತಂಕವನ್ನು ಉಂಟುಮಾಡಿದ ಕಾರಣಕ್ಕಾಗಿ ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.