DAKSHINA KANNADA
ಸಾಲ್ಮರ ಮನೆಮುಂದೆ ಶ*ವ ಇಟ್ಟ ಪ್ರಕರಣ – ಮೂವರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು
ಪುತ್ತೂರು ನವೆಂಬರ್ 19: ಕೆಲಸದ ವೇಳೆ ಕಾರ್ಮಿಕನೊಬ್ಬ ಮೃತಪಟ್ಟು ಆತನ ಶವವನ್ನು ಪಿಕಪ್ ವಾಹನದಲ್ಲಿ ಮರದ ದಿಮ್ಮಿಗಳ ಮೇಲೆ ತುಂಬಿಕೊಂಡು ಬಂದು ಅವರ ಮನೆಯ ಮುಂಭಾಗದ ರಸ್ತೆ ಬದಿಯಲ್ಲಿ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಾಲ್ಮರದ ತಾವೋ ವುಡ್ ಇಂಡಸ್ಟ್ರೀಸ್ ಮಾಲೀಕ ಸೇರಿ ಸಹಿತ ಮೂವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲ್ಮರದ ವುಡ್ ಇಂಡಸ್ಟ್ರೀಸ್‌ನಲ್ಲಿ ಮರದ ಕೆಲಸದ ಮೇಸ್ತ್ರಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಕೂಲಿ ಶಿವಪ್ಪ ಅವರನ್ನು ಕೂಲಿ ಕೆಲಸಕ್ಕೆಂದು ಹೆನ್ರಿ ತಾಪ್ರೊ ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನದ ಹೆನ್ರಿ ತಾವೊ ಮತ್ತು ಮೇಸ್ತ್ರಿ ಸ್ಪ್ಯಾನಿ ಹಾಗೂ ಇನ್ನೊಬ್ಬರು ಅದೇ ಪಿಕಪ್ ವಾಹನದಲ್ಲಿ ಮರದ ದಿಮ್ಮಿಗಳ ಮೇಲೆ ಮಲಗಿಸಿಕೊಂಡು ಬಂದು ಶಿವಪ್ಪ ಅವರ ಮನೆಯ ಬಳಿಯ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು.
ಹೆನ್ರಿ ಅವರು ಶಿವಪ್ಪ ಅವರ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದಲ್ಲದೆ ಅಮಾನವೀಯವಾಗಿ ನಡೆದುಕೊಳ್ಳುವ ಮೂಲಕ ಪರಿಶಿಷ್ಟ ಜಾತಿಯ ನಮಗೆ ಅನ್ಯಾಯ ಮಾಡಿದ್ದಾರೆ. ದಲಿತ ದೌರ್ಜನ್ಯ ಎಸಗಿದ್ದಾರೆ ಎಂದು ಮೃತರ ಶಶಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪುತ್ತೂರು ನಗರ ಪೊಲೀಸರು ಮೃತದೇಹ ಸಾಗಾಟಕ್ಕೆ ಬಳಸಿದ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದು, ಹೆನ್ರಿ ತಾವೊ, ಸ್ಪ್ಯಾನಿ ಮತ್ತು ಇನ್ನೊಬ್ಬರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.