UDUPI
ಲ್ಯಾಬ್ ಟೆಕ್ನಿಶಿಯನ್ ಮಹಿಳೆಯಿಂದ 6 ಮಂದಿಗೆ ಕೊರೊನಾ .. ಕ್ರಿಮಿನಲ್ ಪ್ರಕರಣ ದಾಖಲಿಸಲು ಡಿಸಿ ಸೂಚನೆ
ಉಡುಪಿ ಜೂನ್ 24:ಉಡುಪಿಯಲ್ಲಿ ಕೊರೊನಾ ಸೊಂಕಿತೆಯಾಗಿ ತನ್ನ ಟ್ರಾವೆಲ್ ಹಿಸ್ಟರಿ ಬಚ್ಚಿಟ್ಟು 6 ಮಂದಿಗೆ ಕೊರೊನಾ ಸೊಂಕು ಪಸರಿಸಿದ ಸೂಪರ್ ಸ್ಪ್ರೆಡರ್ ಮಹಿಳೆ ಮೇಲೆ ಕ್ರಿಮಿನಲ್ ಪ್ರಕರಣಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದ್ದಾರೆ.
ಲ್ಯಾಬ್ ಟೆಕ್ನೀಶನ್ ಆಗಿದ್ದ ಮೂವತ್ತು ವರ್ಷ ಪ್ರಾಯದ ಮಹಿಳೆಗೆ ಸೋಂಕು ತಗುಲಿದ್ದು. ಆಕೆ ತನ್ನ ಟ್ರಾವೆಲ್ ಹಿಸ್ಟರಿ ಬಚ್ಚಿಟ್ಟು, ಮುಂಬೈನಿಂದ ಬಂದವರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಹಿಳೆ ಇದರಿಂದಾಗಿ ಮಹಿಳೆಯಿಂದ ಆರು ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ ಮಹಿಳೆಯ ಸಂಪರ್ಕಕ್ಕೆ ಬಂದ ಮಗ(5), ಅಪ್ಪ(63), ಮಾವ (61), ನಾದಿನಿ(23), ಗರ್ಭಿಣಿ ತಂಗಿ(22) ಸಂಬಂಧಿ(32) ಗೆ ಸೋಂಕು ತಗುಲಿದೆ. ಈ ಹಿನ್ನಲೆ ಮಹಿಳೆ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದವರಿಂದಾಗಿ ಕೊರೊನಾ ಸೊಂಕು ಹೆಚ್ಚಾಗುತ್ತಲೇ ಇದ್ದು, ಈ ನಡುವೆ ಕೊರೊನಾ ಸೊಂಕು ತಗುಲಿದ್ದರು ಟ್ರಾವೆಲ್ ಹಿಸ್ಟರಿ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಗಮನಕ್ಕೆ ತರದೆ ಇರುವುವರ ಸಂಖ್ಯೆ ಹೆಚ್ಚಾಗುತ್ತಲೆ ಇದ್ದಾರೆ. ಇತ್ತೀಚೆಗೆ ದೃಢಪಡುತ್ತಿರುವ ಕೊರೊನಾ ಸೊಂಕಿತರಲ್ಲಿ ಕೆಲವರ ಕೊರೊನಾದ ಮೂಲ ಹುಡುಕುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನಲೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಕೊರೊನಾ ಸೊಂಕಿತರು ತಮ್ಮ ಸಂಪರ್ಕಿತರ ಮಾಹಿತಿ ಬಚ್ಚಿಟ್ಟರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
ಮಹಾರಾಷ್ಟದಿಂದ ಈಗಲೂ ಪ್ರತಿದಿನ 200-250 ಮಂದಿ ಜಿಲ್ಲೆಗೆ ರೈಲು ಮತ್ತು ಕಾರುಗಳ ಮೂಲಕ ಆಗಮಿಸುತ್ತಿದ್ದಾರೆ. ಎಲ್ಲರನ್ನು ಕೂಡ ಹೋಮ್ ಕ್ವಾರಂಟೇನ್‌ನಲ್ಲಿ ಇರಿಸಲಾಗುತ್ತಿದೆ. ಇವರಲ್ಲಿ ಗರ್ಭಿಣಿ, ಸಣ್ಣ ಮಕ್ಕಳು ಹಾಗೂ 65 ವರ್ಷಗಳಿಂದ ಮೇಲ್ಪಟ್ಟವರು ಹಾಗೂ ಇತರ ಕಾಯಿಲೆ ಇರುವವರನ್ನು ಪರೀಕ್ಷೆಗೆ ಒಳಪಡಿಸುತ್ತಿದೆವೆ ಎಂದು ಅವರು ತಿಳಿಸಿದರು.
ಕ್ವಾರಂಟೈನ್ ಇರುವವರ ಮನೆ ಭೇಟಿಯಲ್ಲಿ ಪ್ರಥಮ ಸ್ಥಾನ: ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೇನ್ ನಿರ್ವಹಣೆ ಅಸಾಧ್ಯವಾಗುವುದರಿಂದ ವಿಶೇಷವಾಗಿ ಮಹಾರಾಷ್ಟ್ರ ತಮಿಳುನಾಡು, ದೆಹಲಿಯಿಂದ ಬಂದವರಿಗೆ ಹೋಮ್ ಕ್ವಾರಂಟೇನ್ ವಿಧಿಸಲು ಸರಕಾರ ಜಿಲ್ಲಾಧಿಕಾರಿಗೆ ಅಧಿಕಾರ ನೀಡಿದೆ. ಅದರಂತೆ ಜಿಲ್ಲೆಯಲ್ಲಿ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಸುಮಾರು ಅಧಿಕಾರಿಗಳು ಶೇ.91ರಷ್ಟು ಹೋಮ್ ಕ್ವಾರಂಟೇನ್ ವಿಧಿಸಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ ರಾಜ್ಯದಲ್ಲೇ ಜಿಲ್ಲೆಯು ಮೊದಲ ಸ್ಥಾನ ಪಡೆದುಕೊಂಡಿದೆ.
ಹೋಮ್ ಕ್ವಾರಂಟೇನ್‌ನಲ್ಲಿರುವವರು ಮನೆಯಲ್ಲಿಯೇ ಇದ್ದಾರೆ ಎಂಬುದನ್ನು ದೃಢ ಪಡಿಸಲು ಸೆಲ್ಫಿ ಫೋಟೋ ಕಳುಹಿಸುವುದರಲ್ಲಿ ಉಡುಪಿ ಜಿಲ್ಲೆ ಶೇ.48ರಷ್ಟು ಸಾಧನೆ ಮಾಡಿದೆ. ಇನ್ನು ಹೆಚ್ಚಿನ ಸಾಧನೆ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.