DAKSHINA KANNADA
ಪ್ರಧಾನಿಗೆ ಅವಮಾನ, ಜಿಗ್ನೇಶ್ ಮೇವಾನಿ ವಿರುದ್ಧ ಪ್ರಕರಣ ದಾಖಲು.

ಪುತ್ತೂರು,ಸೆಪ್ಟಂಬರ್ 13:ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೀಳು ಪದ ಬಳಸಿ ಟೀಕೆ ಮಾಡಿದ್ದ ಜಿಗ್ನೇಶ್ ಮೇವಾನಿ ವಿರುದ್ಧ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರಿನ ಹಿಂದೂ ಮುಖಂಡ ಅರುಣ್ ಪುತ್ತಿಲ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಧಾನಿ ವಿರುದ್ಧ ಕೀಳುಮಟ್ಟದ ಪದ ಪ್ರಯೋಗಿಸಿದ ಆರೋಪಿ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಸೆಪ್ಟಂಬರ್ 12 ರಂದು (ನಿನ್ನೆ) ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಿಗ್ನೇಶ್ ಮೇವಾನಿ ಕೇಂದ್ರ ಸರಕಾರವೇ ಗೌರಿ ಲಂಕೇಶ್ ರನ್ನು ಕೊಂದಿದೆ.ಇದಕ್ಕೆ ನರೇಂದ್ರ ಮೋದಿಯೇ ಕಾರಣ.ಮೋದಿ ಒಬ್ಬ ನೀಚ ಮನಸ್ಸಿನ ವ್ಯಕ್ತಿಯಾಗಿದ್ದಾನೆ. ಇಂಥ ನಾಲಾಯಕ್ ಮಗನಿಗೆ ಏಕೆ ಜನ್ಮ ನೀಡಿದ್ದೀರಿ ಎಂದು ಪ್ರಧಾನ ಮಂತ್ರಿಯ ತಾಯಿಯನ್ನು ಪ್ರಶ್ನಿಸೋಣ ಎಂದು ಕೇಳು ಮಟ್ಟದ ಹೇಳಿಕೆಯನ್ನು ನೀಡಿದ್ದರು. ಇದರ ವಿರುದ್ಧ ಅರುಣ್ ಪುತ್ತಿಲ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.ಗೌರಿ ಲಂಕೇಶ್ ಕೊಲೆಯನ್ನು ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿಯೇ ಮಾಡಿದ್ದಾರೆ ಎನ್ನುವ ಮೂಲಕ ದೇಶದ ಪ್ರಧಾನಿಯನ್ನು ಕೊಲೆಗಾರ ಎನ್ನುವ ಮೂಲಕ ದೇಶದ್ರೋಹದ ಕೆಲಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.