KARNATAKA
ಕಾರ್ಕಳದಲ್ಲಿ ಪರಸ್ಪರ ಗುದ್ದಾಡಿದ ಕಾರುಗಳು,ಮಧ್ಯೆ ಸಿಲುಕಿಕೊಂಡ ಚಾಲಕನ ರಕ್ಷಿಸಿದ ಅಗ್ನಿಶಾಮಕದಳ..!
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪರಸ್ಪರ ಗುದ್ದಾಡಿದ ಕಾರುಗಳ ಮಧ್ಯೆ ಸಿಲುಕಿಕೊಂಡ ಚಾಲಕನ ಅಗ್ನಿಶಾಮಕ ದಳ ಯಶಸ್ವಿಯಾಗಿ ರಕ್ಷಿಸಿ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ.
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪರಸ್ಪರ ಗುದ್ದಾಡಿದ ಕಾರುಗಳ ಮಧ್ಯೆ ಸಿಲುಕಿಕೊಂಡ ಚಾಲಕನ ಅಗ್ನಿಶಾಮಕ ದಳ ಯಶಸ್ವಿಯಾಗಿ ರಕ್ಷಿಸಿ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ.
ಕಾರ್ಕಳದ ಬಜಗೋಳಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಕರಿಯಕಲ್ಲು – ದಾನಸಾಲೆ ಕೂಡು ರಸ್ತೆಯಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ವಾಹನದ ಒಳಗಡೆ ಸಿಲುಕಿಕೊಂಡಿದ್ದ ಗಾಯಾಳುವನ್ನು ಅಗ್ನಿಶಾಮಕದಳ ರಕ್ಷಿಸಿದ್ದಾರೆ. ಗಾಯಾಳನ್ನು ಮೂಡುಬಿದಿರೆ ಒಂಟಿಕಟ್ಟೆಯ ಸಂದೇಶ್ (35) ಎಂದು ಗುರುತಿಸಲಾಗಿದೆ. ಬಜಗೋಳಿಯಿಂದ ಕರಿಯಕಲ್ಲು ಮಾರ್ಗವಾಗಿ ಕಾರ್ಕಳ ಪೇಟೆಯ ಕಡೆಗೆ ಬರುತ್ತಿದ್ದ ಓಮ್ನಿ ಕಾರು ಹಾಗೂ ಕಾರ್ಕಳದಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದ ಕಾರಿಗೆ ಮುಖಾಮುಖಿಯಾಗಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.ಅಪಘಾತದ ತೀವ್ರತೆಗೆ ಓಮ್ನಿ ಕಾರು ಜಖಂಗೊಂಡಿದ್ದು, ಬಾಗಿಲು ತೆರೆಯಲಾಗದೇ ಒಳಗಡೆ ಗಾಯಾಳು ಸಿಲುಕಿಕೊಂಡಿ ದ್ದರು. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿ ಗಾಯಾಳುವನ್ನು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾದರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ಠಾಣಾಧಿಕಾರಿ ಅಲ್ಟರ್ಟ್ ಮೋನಿಸ್, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಜಯ ಮೂಲ್ಯ, ಸುರೇಶ್, ನಿತ್ಯಾನಂದ, ಉಮೇಶ್ ಭಾಗವಹಿಸಿದ್ದರು.