LATEST NEWS
ಮಂಗಳೂರು – ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿದ ಕಾರು

ಮಂಗಳೂರು ಎಪ್ರಿಲ್ 10: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆಯ ಡಿವೈಡರ್ ಏರಿದ ಘಟನೆ ಮಂಗಳೂರು ನಗರದ ಪಡೀಲ್ ಬಳಿಯ ಅಳಪೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ನಡೆದಿದೆ.
ಪಡೀಲ್ ಕಡೆಯಿಂದ ನಂತೂರಿನ ಕಡೆಗೆ ಸಾಗುತ್ತಿದ್ದ ಕಾರು, ಅಳಪೆಯ ಕಡಿದಾದ ತಿರುವಿನಲ್ಲಿ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣಕ್ಕೆ ಸಿಗದ ಕಾರು, ನೇರವಾಗಿ ರಸ್ತೆಯ ವಿಭಜಕದ ಮೇಲೆ ಹೋಗಿ ಕುಳಿತಿದೆ. ಹೀಗಾಗಿ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಕೇವಲ ಚಾಲಕ ಮಾತ್ರ ಇದ್ದು, ನಂತೂರು ಮಾರ್ಗವಾಗಿ ಮಂಗಳೂರು ನಗರಕ್ಕೆ ಆಗಮಿಸುತ್ತಿದ್ದರು. ಸ್ಥಳೀಯರು ಕಾರನ್ನು ಎತ್ತಿ ಬದಿಗೆ ಸರಿಸಿ ಸ ಸಹಾಯ ಮಾಡಿದ್ದಾರೆ.
