KARNATAKA
ಚಿತ್ರದುರ್ಗ – ನಿಯಂತ್ರಣ ತಪ್ಪಿ 10ಕ್ಕೂ ಅಧಿಕ ಬಾರಿ ಪಲ್ಟಿಯಾದ ಕಾರು – ತಂದೆ ಸೇರಿದಂತೆ ಇಬ್ಬರು ಮಕ್ಕಳು ಬಲಿ

ಚಿತ್ರದುರ್ಗ ಎಪ್ರಿಲ್ 02: ಅತೀ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರಣ ಕಾರಿನಲ್ಲಿದ್ದ ಮೂವರು ಸಾವನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 150 A ನಲ್ಲಿ ನಡೆದಿದೆ. ಸದ್ಯ ಘಟನೆ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಕಾರು ಚಲಾಯಿಸುತ್ತಿದ್ದ ಮೌಲಾ ಅಬ್ದುಲ್ (35) ಮತ್ತು ಅವರ ಇಬ್ಬರು ಪುತ್ರರಾದ ರೆಹಮಾನ್ (15) ಮತ್ತು ಸಮೀರ್ (10) ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೌಲಾ ಅವರ ಪತ್ನಿ ಸಲೀಮಾ ಬೇಗಂ (31), ಅವರ ತಾಯಿ ಫಾತಿಮಾ (75) ಮತ್ತು ಮತ್ತೊಬ್ಬ ಪುತ್ರ ಹುಸೇನ್ ಗಂಭೀರ ಗಾಯಗೊಂಡಿದ್ದಾರೆ. ಪೊಲೀಸರು ಅವರನ್ನು ಬಳ್ಳಾರಿ ವಿಐಎಂಎಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಯಾದಗಿರಿ ಮೂಲದ ಈ ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಅಲ್ಲಿ ಅವರು ಕೂಲಿ ಕೆಲಸ ಮಾಡುತ್ತಿದ್ದರು.

ಮಂಗಳವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 150 A ನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು 10 ಬಾರಿ ಪಲ್ಟಿಯಾಗುವುದನ್ನು ಕಾಣಬಹುದು.
“Speed Thrills but Kills”, when people understand this slogan ?
A Speeding Car Flips 15 times, Bodies Thrown in the Air, claims three lives, in #CCTV
A father and his two sons died, after their #Speeding car lost control and flips 15 times, after… pic.twitter.com/8g3f0CAI93
— Surya Reddy (@jsuryareddy) April 2, 2025