BANTWAL
ಬಂಟ್ವಾಳ – ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಚಾಲಕ ಗಂಭೀರ

ಬಂಟ್ವಾಳ ಜುಲೈ 2: ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿ ಕಾರು ಚಾಲಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬಿಸಿ ರೋಡ್ ಪುಂಜಾಲಕಟ್ಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ನಯನಾಡು ನಿವಾಸಿ ಬ್ಯಾಪ್ಟಿಸ್ ಲೋಬೋ ಅವರ ಪುತ್ರ ಕಾರು ಚಾಲಕ ರಾಕ್ಲಿನ್ ಲೋಬೋ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವೂರು ಸಮೀಪ ಬಡಗುಂಡಿ ಸಮೀಪ ರಿಟ್ಜ್ ಹಾಗೂ ಎರಿಟಿಗಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಎರಿಟಿಗ ಕಾರಿನಲ್ಲಿ ಇತರ ಪ್ರಯಾಣಿಕರಿಗೂ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
