DAKSHINA KANNADA
ರಿವರ್ಸ್ ಚಲಿಸಿ ಅಂಗಡಿಗೆ ಗುದ್ದಿದ ಕಾರು – ಇಬ್ಬರಿಗೆ ಗಾಯ

ಪುತ್ತೂರು ಸೆಪ್ಟೆಂಬರ್ 12: ಚಾಲಕ ಅಸ್ವಸ್ಥಗೊಂಡ ಕಾರಣ ಕಾರು ಹಿಮ್ಮುಖವಾಗಿ ಚಲಿಸಿ ಅಂಗಡಿಯೊಂದಕ್ಕೆ ಗುದ್ದಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಪುತ್ತೂರಿನ ಕಿಲ್ಲೆ ಮೈದಾನದ ಬಳಿ ನಡೆದಿದೆ.
ಕಿಲ್ಲೆ ಮೈದಾನದ ಒಳಗೆ ನಿಲ್ಲಿಸಲಾಗಿದ್ದ ಕಾರನ್ನು ಹೊರ ತೆಗೆಯುವ ಸಂದರ್ಭ ಚಾಲಕ ಅಸ್ವಸ್ಥಗೊಂಡಿದ್ದರು. ಈ ಸಂದರ್ಭ ಕಾರು ಹಿಮ್ಮುಖವಾಗಿ ಚಲಿಸಿ ಪಕ್ಕದಲ್ಲಿದ್ದ ತಾತ್ಕಾಲಿಕ ಅಂಗಡಿಗೆ ಡಿಕ್ಕಿಯಾಗಿದೆ. ಅಂಗಡಿಯಲ್ಲಿದ್ದ ರಮೇಶ್ ಮತ್ತು ಮಹಿಳೆಯೊಬ್ಬರಿಗೆ ಗಾಯವಾಗಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರನ್ನು ಸಂಚಾರಿ ಠಾಣೆಯ ಪೊಲೀಸರು ಠಾಣೆಗೆ ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
