Connect with us

LATEST NEWS

ಕೆನರಾ ನಂದಗೋಕುಲ್ ಶಾಲಾ ಆಡಳಿತದಿಂದ ‘ಅಜ್ಜ-ಅಜ್ಜಿ’ಯಂದಿರಿಗೆ ಗೌರವ

ಮಂಗಳೂರು :  ಕೆನರಾ ನಂದಗೋಕುಲ್ ಶಾಲೆಯಲ್ಲಿ ಅಜ್ಜ-ಅಜ್ಜಿಯರ(Grandparents’) ದಿನಾಚರಣೆಯನ್ನು ವಿಜೃಂಭಣೆಯಿಂದ  ಭುವನೇಂದ್ರ ಸಭಾಂಗಣದಲ್ಲಿ ಆಚರಿಸಲಾಯಿತು.

ಬೆಳಿಗ್ಗೆ 10 ರಿಂದ 11:30ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಮಕ್ಕಳು ಕವನ, ಹಾಡು, ನೃತ್ಯ, ಹಾಗೂ ಮನೋರಂಜನಾತ್ಮಕ ಆಟಗಳ ಮೂಲಕ ತಮ್ಮ ಅಜ್ಜ-ಅಜ್ಜಿಯರ ಮೇಲೆ ಇರುವ ಪ್ರೀತಿ ಮತ್ತು ಗೌರವವನ್ನು ಪ್ರದರ್ಶಿಸಿದರು.

ಕಾರ್ಯಕ್ರಮವು ಪ್ರಾರ್ಥನೆ ಮತ್ತು ದೀಪ ಬೆಳಗಿಸುವ ಮೂಲಕ ಆರಂಭವಾಯಿತು. ಮಕ್ಕಳು ತಮ್ಮ ಅನೇಕ ಕಾರ್ಯಕ್ರಮಗಳ ಮೂಲಕ ಅಜ್ಜ-ಅಜ್ಜಿಯರ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಸಂಗೀತ, ನೃತ್ಯ, ಸ್ಪಾಟ್ ಗೇಮ್ಸ್, ಮತ್ತು ಪ್ರತಿಭಾ ಪ್ರದರ್ಶನವು ಈ ಸಮಾರಂಭದ ಪ್ರಮುಖ ಆಕರ್ಷಣೆಗಳಾಗಿದ್ದು, ಎಲ್ಲರಿಗೂ ಮನೋರಂಜನೆ ನೀಡಿದವು.

ಕಾರ್ಯಕ್ರಮದ ಅಂತ್ಯದಲ್ಲಿ ಅಜ್ಜ-ಅಜ್ಜಿಯರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡು, ಮಕ್ಕಳಿಗೆ ಮೌಲ್ಯಪೂರ್ಣ ಸಲಹೆಗಳನ್ನು ನೀಡಿದರು. ಈ ಕಾರ್ಯಕ್ರಮದ ಯಶಸ್ಸಿಗೆ ಶಾಲೆಯ ಮುಖ್ಯಸ್ಥರು ಹಾಗೂ ಶಿಕ್ಷಕರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಶ್ರೀ ರಂಗನಾಥ ಭಟ ಕೆನರಾ ಶಾಲಾ ಸಂಸ್ಥೆಯ ಕಾರ್ಯದರ್ಶಿಗಳು, ಕೆನರಾ ನಂದಗೋಕುಲ್ ಮತ್ತು ಕೆನರಾ ಇಂಟರ್‌ನ್ಯಾಷನಲ್ ಶಾಲೆಯ ನಿರ್ದೇಶಕಿ ಶ್ರೀಮತಿ ಅಂಜನಾ ಕಾಮತ್, ಸಮನ್ವಯಾಧಿಕಾರಿ ವಂದನಾ, ಶ್ರೀಮತಿ ಪೂರ್ಣಿಮಾ ನಾಯಕ್, ಹಾಗೂ ಶಾಲೆಯ ಶಿಕ್ಷಕ, ಬೋಧಕೇತರ ಸಿಬ್ಬಂದಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *