Connect with us

LATEST NEWS

ಬ್ಯಾರಿ ಸೇರಿದಂತೆ ಅಕಾಡೆಮಿಗಳ ಅನುದಾನ 1 ಕೋಟಿ ರೂಪಾಯಿಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಕೆ – ಯು.ಟಿ ಖಾದರ್

ಬ್ಯಾರಿ ಸೇರಿದಂತೆ ಅಕಾಡೆಮಿಗಳ ಅನುದಾನ 1 ಕೋಟಿ ರೂಪಾಯಿಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಕೆ – ಯು.ಟಿ ಖಾದರ್

ಮಂಗಳೂರು ಜೂನ್ 24: ಬ್ಯಾರಿ ಸೇರಿದಂತೆ ಅಕಾಡೆಮಿಗಳ ಅನುದಾನವನ್ನು 70 ಲಕ್ಷ ರೂ.ನಿಂದ ಒಂದು ಕೋಟಿ ರೂ.ಗೆ ಹೆಚ್ಚಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಮುಂದಿನ ಬಜೆಟ್‌ನಲ್ಲಿ ಘೋಷಣೆ ನಿರೀಕ್ಷೆ ಇದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಪೆರ್ನಾಲ್ ಸಂದೋಲ’ ಮತ್ತು ‘ಕಿನಾದಿ’ ಬ್ಯಾರಿ ಘಝಲ್ ಸಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಬ್ಯಾರಿ ಕ್ಯಾಸೆಟ್ ಬಿಡುಗಡೆ ಮಾಡಲು ಹಣವೂ ಇಲ್ಲದೆ, ಜಾಗವೂ ಇಲ್ಲದೆ ಕಷ್ಟಪಡುವ ಪರಿಸ್ಥಿತಿ ಇತ್ತು. ನಂತರ ಬ್ಯಾರಿ ಸಾಹಿತ್ಯ ಪರಿಷತ್ ಮತ್ತಿತರ ಸಂಘಟನೆಗಳ ಮೂಲಕ ಸುಧಾರಣೆ ಆಯಿತು. ಈಗ ಅಕಾಡೆಮಿ ನೇತೃತ್ವದಲ್ಲಿ ಹಲವು ಅತ್ಯುತ್ತಮ ಕಾರ್ಯಕ್ರಮ ಆಗುತ್ತಿವೆ. ಬ್ಯಾರಿ ಗಝಲ್ ಮೂಲಕ ಬ್ಯಾರಿ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಮೈಲುಗಲ್ಲು ತಲುಪಿದಂತಾಗಿದೆ. ಸಂಗೀತಕ್ಕೆ ಜಾತಿ, ಧರ್ಮದ ಹಂಗಿಲ್ಲ. ಕೊಡುಕೊಳ್ಳುವಿಕೆ ಮೂಲಕ ಸಾಹಿತ್ಯ ಕ್ಷೇತ್ರ ವಿಸ್ತಾರಗೊಳ್ಳಬೇಕು ಎಂದು ಸಚಿವರು ಹೇಳಿದರು.

ಬ್ಯಾರಿ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮಹಮದ್ ಅಧ್ಯಕ್ಷತೆ ವಹಿಸಿ, ಒಂದೂವರೆ ವರ್ಷದಲ್ಲಿ ಅಕಾಡೆಮಿ ಗುಣಮಟ್ಟದ ಕಾರ್ಯಕ್ರಮಗಳನ್ನು ನೀಡಿದೆ. ಇಂದು ಗಝಲ್ ಸಿಡಿ ಬಿಡುಗಡೆ ಮಾಡಿದ್ದು, ಇನ್ನೊಂದು ಮಹತ್ವದ ಯೋಜನೆಯಾಗಿ ಬ್ಯಾರಿ ವ್ಯಾಕರಣ ಗ್ರಂಥ ಶೀಘ್ರ ಬಿಡುಗಡೆ ಮಾಡಲಿದೆ ಎಂದು.

ಸಿಡಿ ನಿರ್ಮಾಣದ ಕಲಾವಿದರಾದ ಮುಹಮ್ಮದ್ ಬಡ್ಡೂರು, ಠಾಗೂರ್ ದಾಸ್, ಪದ್ಮಿನಿ ನಾಯಕ್, ಸುಹೈಲ್ ಬಡ್ಡೂರ್, ಪುರುಷೋತ್ತಮ್ ಕೊಪ್ಪಲ್, ಶಿನೋಯ್ ವಿ.ಜೋಸೆಫ್ ಮತ್ತಿತರರನ್ನು ಸನ್ಮಾನಿಸಲಾಯಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *