LATEST NEWS
ಲಾಕ್ ಡೌನ್ ಆರ್ಥಿಕ ಸಂಕಷ್ಟ: ಮುಂಬಯಿ ಹೊಟೇಲು ಉದ್ಯಮಿ ಆತ್ಮಹತ್ಯೆ

ಉಡುಪಿ: ಕೊರೊನಾ ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿ ಮೂಲದ ಮುಂಬೈ ಹೊಟೇಲ್ ಉದ್ಯಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿ ಜಿಲ್ಲೆಯ ಬಜೆಗೋಳಿ ಮೂಲದ ಹೊಟೇಲ್ ಉದ್ಯಮಿ ವಿರಾರ್ ಕರುಣಾಕರ್ ಪುತ್ರನ್ ಆರ್ಥಿಕ ಸಂಕಷ್ಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಂಬೈಯ ತಮ್ಮ ಸ್ಟಾರ್ ಪ್ಲಾನೆಟ್ ಹೊಟೇಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇವರು ಸ್ಟಾರ್ ಪ್ಲಾನೆಟ್ ಹೊಟೇಲನ್ನು ಬೇರೆಯವರಿಂದ ಬಾಡಿಗೆಗೆ ಪಡೆದು ನಡೆಸುತ್ತಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ತೀವ್ರ ಆರ್ಥಿಕ ಸಂಕಷ್ಟ ತಲೆದೋರಿದ್ದು ಇದರಿಂದ ಬೇಸತ್ತ ಕರುಣಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತ ವಲಯ ಮಾಹಿತಿ ನೀಡಿದೆ. ಇಂದು ಕರುಣಾಕರ್ ಅವರ ಪಾರ್ಥಿವ ಶರೀರವನ್ನು ಹುಟ್ಟೂರು ಬಜಗೋಳಿಗೆ ತರಲಾಗಿದೆ.
