UDUPI
ನಾಳೆಯಿಂದ ಉಡುಪಿಯಲ್ಲಿ ಬಸ್ ಸಂಚಾರ ಆರಂಭ

ಉಡುಪಿ ಜುಲೈ 21: ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಲಾಕ್ ಡೌನ್ ತೆರವು ಗೊಳಿಸಿದ ನಂತರ ಉಡುಪಿ ಜಿಲ್ಲೆಯಲ್ಲೂ ಸೀಲ್ ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ನಾಳೆಯಿಂದ ಜಿಲ್ಲೆಯಾದ್ಯಂತ ಬಸ್ ಓಡಾಟಕ್ಕೆ ಅವಕಾಶ ನೀಡಲಾಗಿದ್ದು, ಜಿಲ್ಲೆಯ ಗಡಿ ಸೀಲ್ ಡೌನ್ ನಲ್ಲೂ ರೂಲ್ಸ್ ಗಳನ್ನು ಸಡಿಲಿಕೆ ಮಾಡಲಾಗಿದೆ.
ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಲಾಕ್ ಡೌನ್ ತೆರವುಗೊಳಿಸಿದ ನಂತರ ರಾಜ್ಯದ ಕೆಲವು ಜಿಲ್ಲೆಗಳಲ್ಲೂ ಲಾಕ್ ಡೌನ್ ನ್ನು ತೆರೆವುಗೊಳಿಸಲು ಪ್ರಾರಂಭವಾಗಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಾಳೆಗೆ ಲಾಕ್ ಡೌನ್ ಅಂತ್ಯವಾಗಲಿದೆ. ಇನ್ನು ಉಡುಪಿಯಲ್ಲೂ ಸೀಲ್ ಡೌನ್ ರೂಲ್ಸ್ ನಲ್ಲಿ ಸಡಿಲಿಕೆ ಮಾಡಲಾಗಿದ್ದು, ಬುಧವಾರದಿಂದ ಬಸ್ ಓಡಾಟ ಆರಂಭವಾಗಲಿದೆ.

ಉಡುಪಿ ಜಿಲ್ಲೆಯಾದ್ಯಂತ ಖಾಸಗಿ, ಸಿಟಿ ಬಸ್ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಸದ್ಯ ಬಸ್ ನಲ್ಲಿ 30 ಜನ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಮಾಸ್ಕ್, ಸ್ಯಾನಿಟೈಸರ್ ನಿಯಮ ಕಡ್ಡಾಯ ಪಾಲಿಸಬೇಕು, ಕಾನೂನು ಮೀರಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ಉಡುಪಿ ಜಿಲ್ಲಾ ಗಡಿ ಸೀಲ್ ಡೌನ್ ನಿಯಮದಲ್ಲೂ ಸಡಿಲಿಕೆ ಮಾಡಲಾಗಿದ್ದು, ಗಡಿಯಲ್ಲಿ ಚೆಕ್ ಪೋಸ್ಟ್ ಮುಂದುವರೆಯಲಿದ್ದು, ಜಿಲ್ಲಾ ಗಡಿಯಲ್ಲೂ ತುರ್ತು ಕಾರಣವಿದ್ದರೆ ಮಾತ್ರ ಓಡಾಟ ಅವಕಾಶ ನೀಡಲಾಗಿದೆ. ಜಿಲ್ಲೆಯ ಗಡಿ ಸೀಲ್‍ಡೌನ್ ಆದೇಶವಷ್ಟೇ ರದ್ದು ಮಾಡಿದ್ದು, ಅನಾವಶ್ಯಕವಾಗಿ ಜಿಲ್ಲೆಗೆ ಬರಬೇಡಿ. ತುರ್ತು ಕೆಲಸ ಹಾಗೂ ಮೆಡಿಕಲ್ ಸೇವೆಗೆ ಜಿಲ್ಲೆಗೆ ಬರಬಹುದು. ಜಿಲ್ಲೆಯ ಚೆಕ್‍ಪೋಸ್ಟ್ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಮಾಹಿತಿ ನೀಡಿದರು.