LATEST NEWS
ಇಬ್ಬರು ಖಾಸಗಿ ಬಸ್ ಕಂಡಕ್ಟರ್ ನಡುವೆ ಹೊಡೆದಾಟ – ವಿಡಿಯೋ ವೈರಲ್

ಮಂಗಳೂರು ಅಕ್ಟೋಬರ್ 31 : ಟೈಮಿಂಗ್ ವಿಚಾರವಾಗಿ ಎರಡು ಖಾಸಗಿ ಬಸ್ ಗಳ ನಿರ್ವಾಹಕರ ಮಧ್ಯೆ ಮಾರಾಮರಿ ನಡೆದ ಘಟನೆ ಮಂಗಳೂರು ನಗರದ ಕಂಕನಾಡಿ ಸಮೀಪ ನಡೆದಿದೆ.
ಕಂಕನಾಡಿಗೆ ಬಸ್ ನಿಲ್ದಾಣದಲ್ಲಿ ಈ ಹೊಯ್ ಕೈ ನಡೆದಿದ್ದು ಟೈಮಿಂಗ್ಸ್ ವಿಚಾರವಾಗಿ ನಿರ್ವಹಕರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ನಂತರ ಭವಾನಿ ಬಸ್ ನ ಕಂಡಕ್ಟರ್ ರೋಶನಿ ಬಸ್ ನೊಳಗೆ ಏಕಾಏಕಿ ನುಗ್ಗಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ. ಇಬ್ಬರೂ ನಿರ್ವಹಕರು ಪ್ರಯಾಣಿಕರ ಎದುರೇ ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿ ಶರ್ಟ್ ಎಳೆದಾಡಿ ಹೋಯ್ ಕೈ ನಡೆಸಿದ್ದು, ಬಸ್ ಚಾಲಕರು ಜಗಳ ಬಿಡಿಸಲು ಹೆಣಗಾಡಿದರೆ ಪ್ರಯಾಣಿಕರು ಮೂಕ ಪ್ರೇಕ್ಷಕರಾಗಿ ಘಟನೆಯನ್ನು ವೀಕ್ಷಣೆ ಮಾಡುತ್ತಿದ್ದರು. ಈ ನಡುವೆ ಯಾರೂ ಮೋಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು ವೈರಲ್ ಮಾಡಿದ್ದಾರೆ.
