LATEST NEWS
ಪಾಣೆಮಂಗಳೂರು ಸೇತುವೆ ಮಧ್ಯ ಭಾಗದಲ್ಲಿ ಕೆಟ್ಟು ನಿಂತ ಬಸ್ – ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಸುಗಟ್ಟಲೆ ಸಂಚಾರ ಅಸ್ತವ್ಯಸ್ತ..!
ಪಾಣೆಮಂಗಳೂರು ಸೇತುವೆ ಮಧ್ಯ ಭಾಗದಲ್ಲಿ ಕೆಟ್ಡು ನಿಂತ ಸಿ.ಸಿ.ಬಸ್ , ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಸುಗಟ್ಟಲೆ ಸಂಚಾರ ಅಸ್ತವ್ಯಸ್ತತೆ ಕಂಡುಬಂದಿದೆ.
ಬಂಟ್ವಾಳ: ಪಾಣೆಮಂಗಳೂರು ಸೇತುವೆ ಮಧ್ಯ ಭಾಗದಲ್ಲಿ ಕೆಟ್ಡು ನಿಂತ ಸಿ.ಸಿ.ಬಸ್ , ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಸುಗಟ್ಟಲೆ ಸಂಚಾರ ಅಸ್ತವ್ಯಸ್ತತೆ ಕಂಡುಬಂದಿದೆ.
ಪುತ್ತೂರು ಕಡೆಯಿಂದ ಮಂಗಳೂರಿಗೆ ಹೋಗುವ ಕಾಂಟ್ರಾಕ್ಟ್ ಕ್ಯಾರೇಜ್ ಸೆಲಿನಾ ಬಸ್ ಪಾಣೆಮಂಗಳೂರು ಹೊಸ ಸೇತುವೆ ಮಧ್ಯ ಭಾಗದಲ್ಲಿ ಕೆಟ್ಟು ನಿಂತ ಪರಿಣಾಮ ಕೆಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು.
ಸೇತುವೆ ಮಧ್ಯೆ ಬಸ್ ಹಾಳಾಗಿ ನಿಂತ ಪರಿಣಾಮ ಟ್ರಾಫಿಕ್ ಕ್ಲಿಯರ್ ಮಾಡಲು ಸಂಚಾರ ಪೋಲಿಸರಿಗೆ ತಲೆನೋವಾಗಿತ್ತು.
ರಾತ್ರಿ ಸುಮಾರು 6.45 ರ ವೇಳೆ ಈ ಘಟನೆ ನಡೆದಿದ್ದು, ಜೋರಾಗಿ ಮಳೆ ಬೇರೆ ಸುರಿಯುತ್ತಿತ್ತು.
ಸೇತುವೆ ಮೇಲೆ ಬೀದಿ ದೀಪಗಳು ಇಲ್ಲದ ಕಾರಣ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದೆ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಪೋಲೀಸರು ಸಾಕಷ್ಟು ತೊಂದರೆ ಅನುಭವಿಸಿದ ಸಂಗತಿ ನಡೆದಿದೆ.
ಕೆಲ ದಿನಗಳ ಹಿಂದೆ ಇದೇ ಭಾಗದಲ್ಲಿ ಅಪಘಾತ ಸಂಭವಿಸಿ ಸುಮಾರು ಹೊತ್ತು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ಟ್ರಾಫಿಕ್ ಎಸ್.ಐ.ಸುತೇಶ್, ಎಸ್. ಐ.2 ಸಂಜೀವ, ಹಾಗೂ ಎ.ಎಸ್.ಐ.ಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದು ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.