DAKSHINA KANNADA
ಬುಲೆಟ್ ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸಾವು

ಬುಲೆಟ್ ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸಾವು
ಪುತ್ತೂರು ಡಿಸೆಂಬರ್ 22: ಬುಲೆಟ್ ಬೈಕ್ – ಲಾರಿ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಮತ್ತೋರ್ವ ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಪಾದೆಕಲ್ಲು ಎಂಬಲ್ಲಿ ಸಂಭವಿಸಿದೆ.
ಮೃತನನ್ನು ಮುಗುಳಿ ನಿವಾಸಿ ಅನ್ವರ್ ಎಂದು ಗುರುತಿಸಲಾಗಿದೆ. ಸಹ ಸವಾರ ನವಾಫ್ ಗಾಯಗೊಂಡಿದ್ದಾರೆ. ಕೇರಳಕ್ಕೆ ಎಂ.ಸ್ಯಾಂಡ್ ಸಾಗಾಟ ಮಾಡುವ ಲಾರಿ ಪಾದೆಕಲ್ಲು ತಿರುವಿನಲ್ಲಿ ಬೈಕ್ ಮತ್ತು ಸವಾರನ ಮೇಲೆ ಚಲಿಸಿದೆ. ಅನ್ವರ್ ಹೊಟ್ಟೆ ಮೇಲೆ ಲಾರಿ ಚಕ್ರ ಚಲಿಸಿದ್ದು ಆತನ ಶರೀರ ಛಿದ್ರಗೊಂಡಿದೆ.

ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಮರಳು ಲಾರಿಗಳ ಸಂಚಾರದ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ಪಡಿಸಿದರು. ವಿಟ್ಲ ಪೊಲೀಸರು ಆಗಮಿಸಿ ಜನರನ್ನು ಚದುರಿಸಿದರು. ಇದೀಗ ಪರಿಸ್ಥಿತಿ ಪೊಲೀಸ್ ನಿಯಂತ್ರಣದಲ್ಲಿದೆ.