Connect with us

    LATEST NEWS

    ನಿಷೇಧವಿದ್ದರೂ ಅವ್ಯವಾಹತವಾಗಿ ನಡೆಯುತ್ತಿರುವ ಬುಲ್ ಟ್ರಾಲ್ ಮೀನುಗಾರಿಕೆ

    ನಿಷೇಧವಿದ್ದರೂ ಅವ್ಯವಾಹತವಾಗಿ ನಡೆಯುತ್ತಿರುವ ಬುಲ್ ಟ್ರಾಲ್ ಮೀನುಗಾರಿಕೆ

    ಮಂಗಳೂರು ಸೆಪ್ಟೆಂಬರ್ 5: ಕೇಂದ್ರ ಸರ್ಕಾರ ನಿಷೇಧ ಹೇರಿರುವ ಬುಲ್‌ಟ್ರಾಲ್‌ ಮೀನುಗಾರಿಕೆ ಮಂಗಳೂರು ಅರಬ್ಬಿ ಸಮುದ್ರದಲ್ಲಿ ಮತ್ತೆ ಕಾಣಿಸಿಕೊಂಡಿದೆ.

    ಬಿಸ್ಮಿಲ್ಲಾ ಹೆಸರಿನ ಎರಡು ಮೀನುಗಾರಿಕಾ ದೋಣಿಗಳು ಅರಬ್ಬಿ ಸಮುದ್ರದಲ್ಲಿ ಕಾನೂನು ಬಾಹಿರವಾಗಿ ಬುಲ್ ಟ್ರಾಲ್ ಮೀನುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ.

    ಬುಲ್ ಟ್ರಾಲ್ ಮೀನುಗಾರಿಕೆಯಿಂದ ಮೀನಿನ ಸಂತತಿ ನಾಶವಾಗಿ ಭೀಕರ ಮತ್ಸ್ಯ ಕ್ಷಾಮ ತಲೆದೋರುವ ಆತಂಕ ದೇಶಾದ್ಯಂತ ಮೀನುಗಾರರು ವ್ಯಕ್ತಪಡಿಸಿದ್ದರಿಂದ ಕೆಂದ್ರ ಸರ್ಕಾರ ಕಳೆದ ನವೆಂಬರಿನಲ್ಲಿ ಈ ರೀತಿಯ ಮೀನುಗಾಕೆಗೆ ನಿಷೇಧ ಹೇರಿತ್ತು.

    ಆದರೆ ಮಂಗಳೂರಿನ ಮೀನುಗಾರರೇ ಈ ರೀತಿಯ ಮೀನುಗಾರಿಕೆ ನಡೆಸುತ್ತಿದ್ದು, ಸ್ಥಳೀಯ ಮೀನುಗಾರರು ಇದರ ವಿರುದ್ದ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇಂತಹ ಮೀನುಗಾರಿಕೆ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *