Connect with us

BELTHANGADI

42 ಮೊಬೈಲ್ ಸಿಮ್ ಜೊತೆ ಬೆಂಗಳೂರಿಗೆ ಹೊರಟ ಯುವಕರು ಅರಸ್ಟ್

ಬೆಳ್ತಂಗಡಿ ಫೆಬ್ರವರಿ 04: ನಿಗೂಢವಾಗಿ ಅಕ್ರಮ ಸಿಮ್ ಸಾಗಾಟ ಮಾಡುತ್ತಿದ್ದ ಯುವಕರ ವಂಚನೆ ಜಾಲವನ್ನು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಹೊರಟಿದ್ದ ಯುವಕರ ತಂಡವನ್ನು ಸೆರೆಹಿಡಿದಿರುವ ಘಟನೆ ನಡೆದಿದೆ. ಯುವಕರ ತಂಡ ಅನುಮಾನಾಸ್ಪ ನಡೆ ಹಿನ್ನೆಲೆ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಗ್ಯಾಂಗ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಐವರಿದ್ದ ಯುವಕ ತಂಡ 42 ಅಕ್ರಮ ಸಿಮ್​ಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸರು ಸೆರೆಹಿಡಿದಿದ್ದಾರೆ. ಫೆಬ್ರವರಿ 1 ರಂದು ನೆರಿಯ ಗ್ರಾಮದಲ್ಲಿ ಯುವಕರನ್ನು ಬಂಧಿಸಿ ಸಿಮ್​ಗಳನ್ನು ಜಪ್ತಿ ಮಾಡಲಾಗಿದೆ. ರಮೀಝ್ (20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ (22) ಮೊಹಮ್ಮದ್ ಸಾಧಿಕ್ (27) ಬಂಧಿತ ಆರೋಪಿಯಾಗಿದ್ದು, ಇವರ ಜೊತೆ 17 ವರ್ಷದ ಅಪ್ರಾಪ್ತ ಬಾಲಕನೂ ಒಳಗೊಂಡಿದ್ದಾನೆ.
ಆರೋಪಿ ಅಕ್ಬರ್​ ಅಲಿ ದುಬೈನಲ್ಲಿ ಇದ್ದಾಗ ಬೇರೆಯವರ ಹೆಸರಿನಲ್ಲಿ ನಕಲಿ ದಾಖಲೆ ಕೊಟ್ಟು ಸಿಮ್​ ಖರೀದಿ ಮಾಡಿದ್ದ. ಎರಡು ವರ್ಷಗಳ ಕಾಲ ದುಬೈನಲ್ಲಿದ್ದ ಈತ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದ. ವಿದೇಶದ ನಂಟು ಇರುವುದರಿಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಅಕ್ಬರ್ ಆಲಿ ಸ್ನೇಹಿತ ಮೊಹಮ್ಮದ್ ಮುಸ್ತಫಾನಿಗೆ ಸಿಮ್‌ ಖರೀದಿಸಲು ಸೂಚಿಸಿದ್ದ. ಮುಸ್ತಫಾ ತನ್ನ ಸ್ನೇಹಿತ ರಮೀಝ್ ಮತ್ತು ಮೊಹಮ್ಮದ್ ಸಾಧಿಕ್‌ ಸಿಮ್‌ ಸಂಗ್ರಹಿಸುವಂತೆ ಹೇಳಿದ್ದ. ಅದರಂತೆ ಇಬ್ಬರು ಎಷ್ಟು ಸಿಮ್ ಕಾರ್ಡ್ ಬೇಕು ಅಷ್ಟನ್ನು ತಮ್ಮ ಅತ್ಮೀಯರಿಂದ ಕಮಿಷನ್ ಕೊಡಿಸಿ ಸಿಮ್‌ ಖರೀದಿಸಿ ನಂತರ ಅನ್ನು ಮುಸ್ತಫಾನಿಗೆ ಸಿಮ್ ಕೊಡುತ್ತಿದ್ದರು. ನಂತರ ಅಕ್ಬರ್ ಆಲಿ ಹೇಳಿದಂತೆ ಸಿಮ್ ಕಾರ್ಡ್‌ಗಳನ್ನು ಮೊಹಮ್ಮದ್ ಮುಸ್ತಫಾ ಪಡೆದುಕೊಂಡು ಬೆಂಗಳೂರು ವ್ಯಕ್ತಿಗಳಿಗೆ ಖಾಸಗಿ ಬಸ್ ಮೂಲಕ ಕಳುಹಿಸುವ ಕೆಲಸ ಮಾಡುತ್ತಿದ್ದ. ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಈ ಎಲ್ಲಾ ವಿಚಾರಗಳು ಬೆಳಕಿಗೆ ಬಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *