LATEST NEWS
ಗಂಗೊಳ್ಳಿ – ರಸ್ತೆ ಮಧ್ಯೆ ಗೂಳಿಗಳ ಕಾಳಗಕ್ಕೆ ಬೆಚ್ಚಿಬಿದ್ದ ಜನರು
ಕುಂದಾಪುರ ಡಿಸೆಂಬರ್ 29: ಎರಡು ಮದವೇರಿದ ಗೂಳಿಗಳು ರಸ್ತೆ ಮಧ್ಯೆ ಕಾಳಗ ಮಾಡಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿದ್ದು, ಈ ಘಟನೆಯಿಂದ ಸ್ಥಳೀಯರು ಕೆಲಕಾಲ ಆತಂಕಗೊಂಡಿದ್ದರು.
ಎರಡು ಗೂಳಿಗಳು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಾಡಿಕೊಂಡ ಪರಿಣಾಮ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ಸಮೀಪ ಮುಖ್ಯ ರಸ್ತೆಯಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳು ಭಯಭೀತರಾದರು. ಈ ಗೂಳಿ ಕಾಳಗ ನೋಡುತ್ತಾ ಜನರು ರಸ್ತೆ ಬದಿಯಲ್ಲಿ ನಿಲ್ಲುವಂತಾಯಿತು.
ಬಳಿಕ ಪಂಪ್‌ಸೆಟ್ ಮೂಲಕ ನೀರು ಹಾಯಿಸಿ, ಪಟಾಕಿ ಸಿಡಿಸಿ ಗೂಳಿ ಕಾಳಗವನ್ನು ತಪ್ಪಿಸಲು ಸ್ಥಳೀಯರು ಹರಸಾಹಸಪಟ್ಟರು. ಇಷ್ಟಾದರೂ ಅವುಗಳನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಸುಮಾರು ಅರ್ಧ ಗಂಟೆ ಬಳಿಕ ಒಂದು ಗೂಳಿ ಓಡಿ ಹೋಯಿತು. ಬಳಿಕ ಮತ್ತೊಂದು ಗೂಳಿ ಶಾಂತವಾಯಿತು.