KARNATAKA
ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆ ಕಾರಣ…!!

ಬೆಂಗಳೂರು ಜನವರಿ 28: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು 30 ವರ್ಷದ ವೈದ್ಯೆ ಸೌಂದರ್ಯ ಆತ್ಮಹತ್ಯೆಗೆ ಪ್ರಸವ ನಂತರದ ಖಿನ್ನತೆ ಕಾರಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಯಾರ ಬಗ್ಗೆಯೂ ಸಂಶಯಗಳಿಲ್ಲ. ಸೌಂದರ್ಯ ಹೆರಿಗೆಯ ನಂತರದ ಖಿನ್ನತೆಗೆ ಒಳಗಾಗಿದ್ದರು. ನಮಗೆಲ್ಲರಿಗೂ ಅದು ಗೊತ್ತಿತ್ತು. ಮೊಮ್ಮಗಳನ್ನು ಸಂತೋಷದಿಂದಿರಿಸಲು ಯಡಿಯೂರಪ್ಪನವರು ಸೌಂದರ್ಯಳನ್ನು ತನ್ನ ಮನೆಗೆ ಕರೆಸುತ್ತಿದ್ದರು” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪನವರ ಮೊದಲ ಪುತ್ರಿ ಪದ್ಮಾವತಿಯವರ ಮಗಳು 30 ವರ್ಷ ಪ್ರಾಯದ ಸೌಂದರ್ಯ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು. ಸೌಂದರ್ಯ ಪತಿ ನೀರಜ್ ಕೂಡಾ ವೈದ್ಯರಾಗಿದ್ದಾರೆ. ದಂಪತಿಗೆ ಒಂಬತ್ತು ತಿಂಗಳ ಮಗುವಿದೆ. ಇಂದು ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಾಂಫ್ರಿಲಾ ಹೋಟೆಲ್ ಬಳಿಯ ಆಪಾರ್ಟ್ ಮೆಂಟ್ ನ ಕೊಠಢಿಯ ಫ್ಯಾನ್ ಗೆ ನೇಣು ಬಿಗಿದು ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.