ನ್ಯೂಯಾರ್ಕ್ ಅಕ್ಟೋಬರ್ 02: ರನ್ ವೇ ನಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ನ್ಯೂಯಾರ್ಕ್ನ (New York) ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ (Airport) ನಡೆದಿದೆ. ಬುಧವಾರ ರಾತ್ರಿ 9:56 ರ ಸುಮಾರಿಗೆ (ಸ್ಥಳೀಯ ಕಾಲಮಾನ) ಈ ಘಟನೆ ನಡೆದಿದೆ.

ಎರಡೂ ವಿಮಾನಗಳು ಡೆಲ್ಟಾ ಏರ್ಲೈನ್ಸ್ಗೆ (Delta Airlines) ಸೇರಿದ್ದಾಗಿವೆ ಎಂದು ತಿಳಿದು ಬಂದಿದೆ. ಒಂದು ವಿಮಾನವು ರನ್ವೇಗೆ ತೆರಳುವಾಗ ಅದರ ಮುಂಭಾಗ ಮತ್ತೊಂದು ವಿಮಾನದ ರೆಕ್ಕೆಗೆ ಬಡಿದಿದೆ. ಇದರಿಂದ ವಿಮಾನದ ರೆಕ್ಕೆ ಮುರಿದಿದೆ. ಅಲ್ಲದೇ ಡಿಕ್ಕಿ ಹೊಡೆದ ವಿಮಾನದ ಮುಂಭಾಗಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಈ ಅಪಘಾತದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಹಾಗೂ ಭಾರೀ ಅವಘಡ ಸಂಭವಿಸಿಲ್ಲ.