LATEST NEWS
ಆಕಸ್ಮಿಕವಾಗಿ ಗಡಿ ದಾಟಿದ ಬಿಎಸ್ ಎಫ್ ಯೋಧನನ್ನ ವಶಕ್ಕೆ ಪಡೆದ ಪಾಕಿಸ್ತಾನ ಸೇನೆ

ಪಂಜಾಬ್ ಎಪ್ರಿಲ್ 24: ಆಕಸ್ಮಿಕವಾಗಿ ಪಾಕಿಸ್ತಾನದ ಪಂಜಾಬ್ ಗಡಿಯನ್ನು ದಾಟಿದ ಬಿಎಸ್‌ಎಫ್ ಜವಾನನನ್ನು ಪಾಕಿಸ್ತಾನ ರೇಂಜರ್ಸ್ ಬಂಧಿಸಿದ್ದಾರೆ. ಆರಂಭಿಕ ಬಿಡುಗಡೆಗಾಗಿ ಎರಡು ಪಡೆಗಳ ನಡುವೆ ಧ್ವಜ ಸಭೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
182ನೇ ಬೆಟಾಲಿಯನ್ ಕಾನ್‌ಸ್ಟೆಬಲ್ ಪಿ.ಕೆ. ಸಿಂಗ್ ಬಂಧಿತ ಯೋಧ. ಫಿರೋಜ್‌ಪುರ್ ಗಡಿ ಬಳಿ ಬುಧವಾರ ಇವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿತ್ತು. ಸಿಂಗ್ ಸೇನಾ ಸಮವಸ್ತ್ರ ಧರಿಸಿದ್ದರು ಹಾಗೂ ಸೇವಾ ಬಂದೂಕು ಹೊಂದಿದ್ದರು. ರೈತರೊಂದಿಗೆ ಇದ್ದ ಇವರು, ವಿಶ್ರಾಂತಿಗಾಗಿ ನೆರಳು ಅರಸಿ ಹೊರಟಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ ಸಿಂಗ್ ಅವರನ್ನು ಪಾಕಿಸ್ತಾನಿ ಸೇನೆ ವಶಕ್ಕೆ ಪಡೆದಿದೆ ಎಂದು ಮೂಲಗಳು ಹೇಳಿವೆ.

ಇಂಥ ಘಟನೆಗಳು ಎರಡೂ ಕಡೆಯಿಂದ ಆಗಾಗ್ಗ ನಡೆಯುತ್ತಲೇ ಇರುತ್ತವೆ. ಹೀಗಾಗಿ ಇದು ವಿಶೇಷ ಪ್ರಕರಣವಲ್ಲ. ಆದರೆ ಪಹಲ್ಗಾಮ್ ಘಟನೆ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಬಿಗುವಿನ ವಾತಾವರಣ ಸೃಷ್ಟಿಯಾಗಿರುವುದರಿಂದ ಈ ಘಟನೆ ಮಹತ್ವ ಪಡೆದುಕೊಂಡಿದೆ.