KARNATAKA
ಆರತಕ್ಷತೆ ಸಂದರ್ಭ ಕುಸಿದು ಬಿದ್ದ ಮದುಮಗಳ ಮೆದುಳು ನಿಷ್ಕ್ರೀಯ..ಅಂಗಾಗ ದಾನಕ್ಕೆ ಮುಂದಾದ ಪೋಷಕರು
ಕೋಲಾರ:ಮದುವೆ ಆರತಕ್ಷತೆ ನಡೆಯುತ್ತಿದ್ದ ಸಂದರ್ಭ ಅಸ್ವಸ್ಥಳಾಗಿ ಬಿದ್ದ ಮದುಗಳು ಬ್ರೈನ್ ಡೆಡ್ ಆದ ಆತಂಕಕಾರಿ ಘಟನೆ ಕೊಲಾರದಲ್ಲಿ ನಡೆದಿದೆ. ಈ ಘಟನೆಯ ಕುರಿತಂತೆ ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ಚೈತ್ರಾ(26) ಮದುವೆ ಆರತಕ್ಷತೆಯ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು.
ತಕ್ಷಣ ಆಕೆಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಣೆ ಮಾಡಿದ್ದು ,ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ.
ಈ ಘಟನೆ ಕುರಿತಂತೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಕೆ.ಸುಧಾಕರ್, 26 ವರ್ಷದ ಚೈತ್ರಾಗೆ ಇದು ದುರಂತದ ದಿನ.ಚೈತ್ರಾ ಬಾಳಲ್ಲಿ ವಿಧಿ ಬೇರೆ ಪ್ಲಾನ್ಮಾಡಿರುವಂತೆ ಗೋಚರಿಸುತ್ತಿದೆ.ಮದುವೆ ಆರತಕ್ಷತೆ ವೇಳೆ ಕುಸಿದು ಬಿದ್ದ ಚೈತ್ರಾರ ಮೆದುಳು
ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪೋಷಕರನ್ನು ಸಮಾಧಾನಿಸಿದ ವೈದ್ಯರೂ ಚೈತ್ರ ಸಾವನ್ನಪ್ಪಿದರೂ ಬೇರೆಯವರ ಬಾಳಿಗೆ ಬೆಳಕಾಗುವಂತೆ ಅಂಗಾಂಗ ದಾನ ಮಾಡೋದಕ್ಕೆ ಮನವೊಲಿಕೆ ಮಾಡಿದ್ದಾರೆ.
ಇನ್ನು ವೈದ್ಯರ ಮಾತಿಗೆ ಒಪ್ಪಿಗೆ ಸೂಚಿಸಿದ ಪೋಷಕರು, ಚೈತ್ರಳ ಅಂಗಾಗ ದಾನ ಮಾಡಿದ್ದಾದ್ದು, ಈ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.