Connect with us

KARNATAKA

ಸೋಶಿಯಲ್ ಮಿಡಿಯಾದಲ್ಲಿ ಟ್ರೆಂಡ್ ಸೆಟ್ಟ್ ಮಾಡಿದ ಯುವತಿಯ ಬೈಸೆಪ್ಸ್ ಮತ್ತು ಬ್ರಾಹ್ಮಿನ್ ಜೀನ್ಸ್ ಪದ

ಬೆಂಗಳೂರು ಅಗಸ್ಟ್ 25: ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನಗಳಿಂದ ಸಖತ್ ಟ್ರೆಂಡಿಂಗ್ ನಲ್ಲಿರುವ ಬ್ರಾಹ್ಮಿನ್ ಜೀನ್ಸ್ ಎಂಬ ಪದ ಮೊದಲು ಹುಟ್ಟುಹಾಕಿದ್ದು ಬೆಂಗಳೂರಿನ ಯುವತಿ ಅನುರಾಧಾ ತಿವಾರಿ. ಇನ್ನೂ ವ್ಯಾಪಕ ಚರ್ಚೆಯಲ್ಲಿದೆ ಈ ಪದ.


ಬೆಂಗಳೂರಿನ ಕಟೆಂಟ್ ಕ್ರಿಯೆಟರ್ ಕಂಪೆನಿಯೊಂದರ ಸಿಇಓ ಆಗಿರುವ ಅನುರಾಧಾ ತಿವಾರಿ ಅವರು ಎಂಬುವರು ಆಗಸ್ಟ್ 22ರಂದು ಸಾಮಾಜಿಕ ಜಾಲತಾಣ ಎಕ್ಸ್‌(ಟ್ವಿಟರ್)ನಲ್ಲಿ ತಮ್ಮ ಬೈಸೆಪ್ಸ್ ಫೋಟೊವನ್ನು ಪೋಸ್ಟ್ ಮಾಡಿ ‘ಬ್ರಾಹ್ಮಿನ್ ಜೀನ್ಸ್’ (Brahmin genes) ಎಂಬ ಶೀರ್ಷಿಕೆ ನೀಡಿದ್ದರು. ಇದೀಗ ಈ ಶಿರ್ಷಿಕೆ ಹಾಗೂ ಪೋಟೊ ವೈರಲ್ ಆಗುತ್ತಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ. ಯುವತಿಯ ಟ್ವೀಟ್ ಗೆ ಕೆಲವು ಇನ್ನೂ ಜಾತಿ ವ್ಯವಸ್ಥೆ ದೇಶದಲ್ಲಿ ಇದೆ ಎಂದು ಹೇಳಿ ಉತ್ತರಿಸಿದ್ದಾರೆ. ಆದರೆ ಅವರ ಎಲ್ಲಾ ಟೀಕೆಗಳಿಗೆ ಅನುರಾಧಾ ಅವರು ಸರಿಯಾಗೇ ಉತ್ತರ ಕೊಟ್ಟಿದ್ದಾರೆ.

ಅನುರಾಧಾ ಅವರ ಮೊದಲ ಪೋಸ್ಟ್ ನಲ್ಲಿ ರಸ್ತೆಯಲ್ಲಿ, ಸ್ಕೂಟರ್‌ ಪಕ್ಕ ನಿಂತ ಅನುರಾಧಾ ತಿವಾರಿ ಅವರು ಎಡಗೈನಲ್ಲಿ ಎಳನೀರು ಹಿಡಿದುಕೊಂಡು ಬಲಗೈಯ ಬೈಸೆಪ್ಸ್ ಪ್ರದರ್ಶಿಸಿರುವ ಫೋಟೊ ಶೇರ್‌ ಮಾಡಿ ʼಬ್ರಾಹ್ಮಿನ್ ಜೀನ್ಸ್ʼ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಗೆ ವ್ಯಾಪತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಫಿಟ್‌ನೆಸ್ ಬ್ರಾಹ್ಮಣರಲ್ಲಿ ಮಾತ್ರ ಕಂಡುಬರಲು ಸಾಧ್ಯ ಎಂಬಂತಿದೆ ಈ ಪೋಸ್ಟ್‌ ಎಂದೆಲ್ಲ ಕಮೆಂಟ್‌ ಮಾಡಿದ್ದಾರೆ. ಜತೆಗೆ ಜಾತೀಯತೆಯನ್ನು ಎಳೆದು ತಂದಿದ್ದಾರೆ. ಯಾಕೆ ಜಾತಿ ಪದ್ಧತಿ ಇನ್ನೂ ಬೇರೂರಿದೆ? ಇವರು ಹೇಳುತ್ತಿರುವುದು ನೋಡಿದರೆ ಉನ್ನತ ಅಥವಾ ನಿರ್ದಿಷ್ಟ ವಂಶವಾಹಿಗಳು ಫಿಟ್ ಆಗಿದ್ದಾರೆ. ಫಿಟ್ ಆಗಿರಲು ವಂಶಾವಾಹಿ ಕಾರಣ ಎಂಬಂತಿದೆ ಎಂದು ಕೆಲ ಬಳಕೆದಾರರು ಕಿಡಿಕಾರಿದ್ದಾರೆ.

ಈ ಪೋಸ್ಟ್ ವೈರಲ್ ಆಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ತಮ್ಮ ವಿರುದ್ಧ ಟೀಕೆಗಳಿಗೆ ತಿರುಗೇಟು ನೀಡಿರುವ ಅನುರಾಧಾ ಅವರು, “ನಿರೀಕ್ಷಿಸಿದಂತೆ ‘ಬ್ರಾಹ್ಮಣ’ ಎಂಬ ಪದದ ಉಲ್ಲೇಖವು ಅನೇಕರನ್ನು ಕೆರಳಿಸಿದೆ. ನಿಜವಾದ ಜಾತಿವಾದಿಗಳು ಯಾರು ಎಂಬುದನ್ನು ಇದು ತಿಳಿಸುತ್ತದೆ. ಸಾಮಾನ್ಯ ವಿಭಾಗದವರು ವ್ಯವಸ್ಥೆಯಿಂದ ಏನನ್ನೂ ಪಡೆಯುವುದಿಲ್ಲ – ಯಾವುದೇ ಮೀಸಲಾತಿ ಇಲ್ಲ, ಉಚಿತ ಕೊಡುಗೆಗಳಿಲ್ಲ. ನಾವು ಎಲ್ಲವನ್ನೂ ಸ್ವಂತವಾಗಿ ಸಂಪಾದಿಸುತ್ತೇವೆ ಮತ್ತು ನಮ್ಮ ವಂಶಾವಳಿಯ ಬಗ್ಗೆ ಹೆಮ್ಮೆ ಪಡಲು ಎಲ್ಲ ಹಕ್ಕು ನಮಗಿದೆʼʼ ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *