LATEST NEWS
ಬ್ರಹ್ಮಾವರ – ತಂದೆಯನ್ನು ಕೊಂದ ಮಗ ಅರೆಸ್ಟ್

ಬ್ರಹ್ಮಾವರ ಅಕ್ಟೋಬರ್ 8: ಪೆಜಮಂಗೂರು ಗ್ರಾಮದ ಮೊಗವೀರಪೇಟೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಆನಂದ ಮರಕಾಲ(50) ಎಂದು ಗುರುತಿಸಲಾಗಿದೆ. ಆರೋಪಿ ಅಕ್ಟೋಬರ್ 7 ರಂದು ತನ್ನ ತಂದೆ ಸಾಧು ಮರಕಾಲ(68) ಅವರನ್ನು ಮಧ್ಯಾಹ್ನ ಮನೆಯಲ್ಲಿ ಕತ್ತಿಯಿಂದ ಕಡಿದು ಪರಾರಿಯಾಗಿದ್ದನು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಆರೋಪಿಯನ್ನು ಉಪ್ಪೂರು ಎಂಬಲ್ಲಿ ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿ ಆನಂದ ಮನೆಗೆ ಬಂದು ತಂದೆ ಜೊತೆ ಆಗ್ಗಾಗೆ ಗಲಾಟೆ ಮಾಡುತ್ತಿದ್ದ ಅಲ್ಲದೆ ತನ್ನ ತಂದೆ ಸಾಧು ಅವರನ್ನು ಮನೆಯಿಂದ ಹೊರ ಹಾಕಬೇಕೆಂದು ದ್ವೇಷವನ್ನು ಹೊಂದಿದ್ದನು. ಇದೇ ದ್ವೇಷದಿಂದ ಆತ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.