Connect with us

    LATEST NEWS

    ಕಂಪೆನಿಗಳ ಬಗ್ಗೆ ನಡೆಯುತ್ತಿರುವ ತನಿಖೆಗೆ ಸಂಪೂರ್ಣ ಸಹಕಾರ – ಬಿ.ಆರ್ ಶೆಟ್ಟಿ

    ಮಂಗಳೂರು: ಬೆಂಗಳೂರಿನಿಂದ ಯುಎಇಗೆ ತೆರಳುತ್ತಿರುವ ಸಂದರ್ಭ ಬಿ.ಆರ್ ಶೆಟ್ಟಿ ಅವರಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಲಿಲ್ಲ ಎಂದ ಸುದ್ದಿಯನ್ನು ಬಿ.ಆರ್ ಶೆಟ್ಟಿ ಅಲ್ಲಗಳೆದಿದ್ದಾರೆ. ನನ್ನ ಪತ್ನಿ ಯುಎಇಗೆ ತೆರಳುತ್ತಿದ್ದು , ಅವಳನ್ನು ಬಿಡಲು ವಿಮಾನ ನಿಲ್ದಾಣಕ್ಕೆ ತೆರಳಿದ್ದೆ ಎಂದು ತಿಳಿಸಿದ್ದಾರೆ.


    ಇದೇ ಶುಕ್ರವಾರ ನಾನು ಯುಎಇಗೆ ತೆರಳಲಿದ್ದು, ನನ್ನ ಕಂಪನಿಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಸಹಕರಿಸುತ್ತೆನೆ ಎಂದು ತಿಳಿಸಿದ ಅವರು ಯುಎಇಯ ನ್ಯಾಯ ವ್ಯವಸ್ಥೆಯ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ ಹಾಗೂ ವಂಚನೆ ಮಾಡಿದವರು ಕಾನೂನು ಕ್ರಮಕ್ಕೆ ಗುರಿಯಾಗುವುದನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
    ಕಂಪನಿಗಳು, ಅವುಗಳ ಉದ್ಯೋಗಿಗಳು, ಷೇರುದಾರರು ಮತ್ತು ಕಂಪನಿಗಳೊಂದಿಗೆ ಸಂಬಂಧ ಹೊಂದಿರುವ ಇತರರಿಗೆ ಆಗಿರಬಹುದಾದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲ ಪ್ರಾಧಿಕಾರಗಳಿಗೆ ಸಹಕಾರ ನೀಡಲು ನಾನು ಯುಎಇಗೆ ಮರಳುತ್ತಿದ್ದೇನೆ ಎಂದು ಶೆಟ್ಟಿ ಹೇಳಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *