Connect with us

    FILM

    ಕೇಸರಿ ಬಿಕಿನಿ ವಿವಾದ – ಪಠಾಣ್​’ ಚಿತ್ರದ ‘ಬೇಷರಂ​ ರಂಗ್​’ ವಿರುದ್ದ ಆಕ್ರೋಶ

    ಮುಂಬೈ ಡಿಸೆಂಬರ್ 14: ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಚಿತ್ರದ ‘ಬೇಷರಂ​ ರಂಗ್​’ ಹಾಡು ಬಿಡುಗಡೆಯಾಗಿದ್ದು, ಇದೀಗ ಹಾಡಿನಲ್ಲಿ ದಿಪೀಕಾ ಅವರು ಧರಿಸಿದ್ದ ಬಿಕಿನಿ ಬಣ್ಣ ಕುರಿತಂತೆ ವಿವಾದ ಎದ್ದಿದ್ದು, ಸಿನೆಮಾವನ್ನು ಬಾಯ್ಕಾಟ್ ಗೆ ಕರೆ ನೀಡಿದ್ದಾರೆ.


    ಶಾರುಖ್​ ಖಾನ್​ ಅವರ ಹೊಸ ಸಿನಿಮಾ ‘ಪಠಾಣ್​’ ಬಿಡುಗಡೆಗೆ ಸಜ್ಜಾಗುತ್ತಿದೆ. ಆ ಚಿತ್ರದ ‘ಬೇಷರಂ ರಂಗ್​..’ ಹಾಡು ರಿಲೀಸ್​ ಹಿಟ್ ಆಗಿದೆ. ಇನ್ನು ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡ ರೀತಿ ಅಶ್ಲೀಲವಾಗಿದೆ ಎಂದು ಜನರು ಟ್ರೋಲ್​ ಮಾಡುತ್ತಿದ್ದಾರೆ. ಅಲ್ಲದೇ, ದೀಪಿಕಾ ಧರಿಸಿದ ಬಿಕಿನಿಯ ಬಣ್ಣದ ಬಗ್ಗೆಯೂ ತಕರಾರು ತೆಗೆಯಲಾಗಿದೆ. ಈಗ ಸೋಶಿಯಲ್​ ಮೀಡಿಯಾದಲ್ಲಿ #BoycottPathaan ಎಂಬ ಟ್ರೆಂಡ್​ ಶುರುವಾಗಿದೆ. ಇದು ಹೀಗೆಯೇ ಮುಂದುವರಿದರೆ ‘ಪಠಾಣ್​’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ.


    ‘ಬೇಷರಂ ರಂಗ್​..’ ಗೀತೆಯನ್ನು ಗ್ಲಾಮರಸ್​ ಆಗಿ ಚಿತ್ರಿಸಲಾಗಿದೆ. ಇದೊಂದು ‘ಅಶ್ಲೀಲ ಸಾಂಗ್​’ ಎಂದು ನೆಟ್ಟಿಗರು ಹಣೆಪಟ್ಟಿ ಕಟ್ಟುತ್ತಿದ್ದಾರೆ. ‘ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ಬೇಷರಮ್​ ರಂಗ್​ (ನಾಚಿಕೆಯಿಲ್ಲದ ಬಣ್ಣ) ಎಂದಿರುವುದು ಸರಿಯಲ್ಲ’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply