BELTHANGADI
ಪ್ರಧಾನಿ ಪತ್ರಕ್ಕೂ ಕ್ಯಾರೆ ಅನ್ನದ ಅಧಿಕಾರಿಗಳು – ಗ್ರಾಮಸ್ಥರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಪ್ರಧಾನಿ ಪತ್ರಕ್ಕೂ ಕ್ಯಾರೆ ಅನ್ನದ ಅಧಿಕಾರಿಗಳು – ಗ್ರಾಮಸ್ಥರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ
ಬೆಳ್ತಂಗಡಿ ಮಾರ್ಚ್ 11: ರಸ್ತೆ ದುರಸ್ಥಿಗೆ ಪ್ರಧಾನಿ ಕಾರ್ಯಾಲಯದಿಂದ ಬಂದ ಪತ್ರಕ್ಕೂ ಯಾವುದೇ ಕ್ರಮಕೈಗೊಳ್ಳದ ಹಿನ್ನಲೆಯಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿರುವ ಘಟನೆ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಲ್ಲಮಾಡ-ಮುಗೇರಡ್ಕ ರಸ್ತೆ ದುರಸ್ಥಿ ಮಾಡದ ಹಿನ್ನೆಲೆ ಬಂದರು-ಮೊಗ್ರು ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.

ಬೆಳ್ತಂಗಡಿ-ಉಪ್ಪಿನಂಗಡಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿ ಕಲ್ಲಮಾಡ-ಮುಗೇರಡ್ಕ. ಕಳೆದ ಕೆಲವು ವರ್ಷಗಳಿಂದ ಕಲ್ಲಮಾಡ – ಮುಗೇರಡ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು. ಈ ಸಂಬಂಧ ಗ್ರಾಮಸ್ಥರು ಹಲವು ಭಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿರಲಿಲ್ಲ, ಬೆಳ್ತಂಗಡಿ ಶಾಸಕ ವಸಂತ್ ಬಂಗೇರ ಅವರಿಗೂ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ.
ಕೊನೆಗೆ ಅಧಿಕಾರಿಗಳ ನಿದ್ರಾಹೀನ ವ್ಯವಸ್ಥೆ ಕಂಡು ಪ್ರಧಾನಿ ಕಾರ್ಯಾಲಯಕ್ಕೆ ಮನವಿ ಮಾಡಿದ್ದರು. ಪ್ರಧಾನಿ ಕಾರ್ಯಾಲಯದಿಂದ ರಸ್ತೆ ದುರಸ್ಥಿಪಡಿಸಲು ಅಧಿಕಾರಿಗಳಿಗೆ ಕಾರ್ಯಾಲಯದಿಂದ ಪತ್ರ ಬಂದಿದ್ದರೂ ಅಧಿಕಾರಿಗಳು ಉದಾಸೀನತೆ ತೋರಿದ್ದಾರೆ, ಅಧಿಕಾರಿ ವರ್ಗ-ಶಾಸಕರ ನಿದ್ರಾವಸ್ಥೆ ಕಂಡು ರೋಸಿ ಹೋಗಿರುವ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.
ಬಂದರು-ಮೊಗ್ರು ಗ್ರಾಮದಲ್ಲಿ ಸುಮಾರು 90ಕ್ಕೂ ಅಧಿಕ ಕುಟುಂಬಗಳು ವಾಸವಾಗಿದ್ದು, ಇಲ್ಲಿ 90ಕ್ಕೂ ಅಧಿಕ ಕುಟುಂಬದ 500ಕ್ಕೂ ಅಧಿಕ ಜನರು ಮತದಾರರಿದ್ದಾರೆ .