DAKSHINA KANNADA
ಪಬ್ ಜೀ ಗೇಮ್ ಗಾಗಿ ತಲೆ ಕೂದಲು ಕತ್ತರಿಸಿಕೊಂಡ ಬಾಲಕ

ಉಪ್ಪಿನಂಗಡಿ: ಮೊಬೈಲ್ ಗೇಮ್ ಗಳು ಮಕ್ಕಳಿಗೆ ಎಷ್ಟು ಮಾರಕವಾಗಿ ಪರಿಣಮಿಸುತ್ತದೆ ಎನ್ನುವುದು ಇತ್ತೀಚೆಗೆ ಮಂಗಳೂರಿನಲ್ಲಿ ಉಳ್ಳಾಲದಲ್ಲಿ ಕೊಲೆಯಾದ ಬಾಲಕ ಘಟನೆ ಘಟನೆ ನೆನಪಿಸುತ್ತದೆ. ಈ ನಡುವೆ ಮತ್ತೆ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಉಪ್ಪಿನಂಗಡಿಯ ಖಾಸಗಿ ಪ್ರೌಢಶಾಲಾ ವಿದ್ಯಾರ್ಥಿ ಪಬ್ ಜಿ ಆಟದಲ್ಲಿ ತಲೆಕೂದಲನ್ನು ವಿಕಾರವಾಗಿ ಕತ್ತರಿಸಿಕೊಂಡಿದ್ದಾನೆ.
9 ನೇ ತರಗತಿ ವಿದ್ಯಾರ್ಥಿ ತಲೆಕೂದಲನ್ನು ವಿಕಾರವಾಗಿ ಕತ್ತರಿಸಿರುವುದನ್ನು ಗಮನಿಸಿದ ಪಾಲಕರು ಆತನನ್ನು ಪ್ರಶ್ನಿಸಿದರು. ಮೊದಲು ಸುಳ್ಳು ಕತೆ ಹೆಣೆಯಲು ಪ್ರಯತ್ನಿಸಿದ ಬಾಲಕ, ಮತ್ತಷ್ಟು ವಿಚಾರಿಸಿದಾಗ ಪಬ್‌ಜಿ ಆಟದಲ್ಲಿ ಮಗ್ನನಾಗಿ ಮೊಬೈಲ್ ಮುಂದೆ ತಲೆ ಕೂದಲು ತೆಗೆದುಕೊಂಡದ್ದಾಗಿ ತಿಳಿಸಿದ್ದಾನೆ.

ಕೊರೊನಾ ಹಿನ್ನಲೆ ಆನ್ ಲೈನ್ ಶಿಕ್ಷಣ ವ್ಯವಸ್ಥೆಗೆ ಮೊಬೈಲ್ ಮಕ್ಕಳ ಕೈಗೆ ಬಂದಿದ್ದು, ಇದರಿಂದಾಗಿಯೇ ಮಕ್ಕಳು ಈ ರೀತಿ ಮೊಬೈಲ್ ಗೇಮ್ ಗಳಿಗೆ ದಾಸರಾಗಿದ್ದಾರೆ ಎಂದು ಪಾಲಕರು ದೂರಿದ್ದು, ಈ ಘಟನೆಯನ್ನು ಮನೆಯವರು ಪೊಲೀಸರ ಗಮನಕ್ಕೆ ತಂದಾಗ ಆಟದಲ್ಲಿ ಇನ್ನಷ್ಟು ಮಕ್ಕಳು ಭಾಗಿಯಾಗಿರುವುದು ಪತ್ತೆಯಾಗಿದೆ. ಎಲ್ಲ ವಿದ್ಯಾರ್ಥಿಗಳಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನು ಮಕ್ಕಳಿಗೆ ಕರೊನಾ ವೈರಸ್ ತಗುಲಿದರೂ ಚಿಂತೆ ಇಲ್ಲ, ದಯವಿಟ್ಟು ಶಾಲೆಯಲ್ಲೇ ಶಿಕ್ಷಣ ಕೊಡಿಸಿ. ಮೊಬೈಲ್‌ನಲ್ಲೇ ಮಕ್ಕಳು ಶಿಕ್ಷಣ ನೆಪದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.