ಆನ್ ಲೈನ್ ನಲ್ಲೇ ಇಡೀ ರೈಲು ಬುಕ್ ಮಾಡಿ
ಆನ್ ಲೈನ್ ನಲ್ಲೇ ಇಡೀ ರೈಲು ಬುಕ್ ಮಾಡಿ
ನವದೆಹಲಿ: ರೈಲಿನ ನಿಗದಿತ ಕೋಚ್ ನ್ನು ಅಥವಾ ಸಂಪೂರ್ಣ ರೈಲನ್ನೆ ಬುಕ್ ಮಾಡುವ ಹೊಸ ಸೌಲಭ್ಯವನ್ನು ರೈಲ್ವೆ ಇಲಾಖೆ ನೀಡಿದೆ. ಎಫ್ ಟಿಆರ್ (ಫುಲ್ ಟಾರಿಫ್ ರೇಟ್) ಮೂಲಕ ವಿಶೇಷ ರೈಲು , ಬೋಗಿಗಳನ್ನು ರೈಲ್ವೆಯ ಆನ್ ಲೈನ್ ಟಿಕೆಟ್ ರಿಸರ್ವೇಶನ್ ವೈಬ್ ಸೈಟ್ ಮೂಲಕ ಮಾಡಬಹುದಾಗಿದೆ. ಮದುವೆ, ಪಾರ್ಟಿ, ಧಾರ್ಮಿಕ ಗುಂಪಿನಲ್ಲಿ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
ಸದ್ಯದ ವ್ಯವಸ್ಥೆಯಲ್ಲಿ ರೈಲಿನ ಬೋಗಿ ಅಥಲಾ ರೈಲನ್ನು ಬುಕ್ ಮಾಡಬೇಕಾದರೆ ಚೀಫ್ ಬುಕಿಂಗ್ ಸೂಪರ್ ವೈಸರ್ ಅಥಾ ಸ್ಟೇಷನ್ ಮಾಸ್ಟರ್ ಭೇಟಿಯಾಗಬೇಕಿತ್ತು, ಮತ್ತು ಎಲ್ಲಿ ಪ್ರಯಾಣ ಆರಂಭವಾಗುತ್ತದೆಯೋ ಅಲ್ಲಿಯ ಸ್ಟೇಷನ್ ಮಾಸ್ಟರ್ ಅವರಿಗೆ ಮನವಿ ಸಲ್ಲಿಸಿ, ಹಣ ಡೆಪಾಸಿಟ್ ಮಾಡದ ಬಳಿಕ ಎಫ್ ಟಿಆರ್ ನಲ್ಲಿ ರೈಲು ಬುಕಿಂಗ್ ಮಾಡಲಾಗುತ್ತಿತ್ತು. ಇದು ಅತಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದ್ದ ಕಾರಣ ಈಗ ಹೊಸ ವ್ಯವಸ್ಥೆಯನ್ನು ರೈಲ್ವಇಲಾಖೆ ಪರಿಚಯಿಸಿದೆ.