FILM
ಗಂಡನೊಂದಿಗೆ ಜಗಳವಾಡಿದ್ದಾರೆ ಎಂದು ಸುದ್ದಿ ಮಾಡಿದರೆ ಮಾನಹಾನಿಯಾಗುತ್ತದೆಯಾ…ಶಿಲ್ಪಾಶೆಟ್ಟಿಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

ಮುಂಬೈ ಜುಲೈ 31: ಪತಿ ರಾಜ್ ಕುಂದ್ರಾ ಬ್ಲೂಫಿಲ್ಮ್ ದಂಧೆಯಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಪತ್ನಿ ಶಿಲ್ಪಾಶೆಟ್ಟಿ ಮಾಧ್ಯಮಗಳ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಲು ಹೋಗಿ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಪೊಲೀಸ್ ಮೂಲಗಳನ್ನು ಆಧರಿಸಿದ ಮಾಡುವ ಸುದ್ದಿಗಳನ್ನು ಮಾನಹಾನಿಕರ ಎಂದು ಹೇಳಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಹೇಳಿದೆ.
ಪತಿ ರಾಜ್ ಕುಂದ್ರಾ ಬ್ಲೂಫಿಲ್ಮ್ ದಂಧೆಯಲ್ಲಿ ಆರೆಸ್ಟ್ ಆಗುವುದರೊಂದಿಗೆ ಮಾಧ್ಯಮಗಳಲ್ಲಿ ಶಿಲ್ಪಾಶೆಟ್ಟಿ ಕುರಿತಂತೆ ವರದಿಗಳು ಬರಲಾರಂಭಿಸಿವೆ. ಪತಿ ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಕುರಿತು ಸುಳ್ಳು ಮತ್ತು ಚಾರಿತ್ರ್ಯ ಹರಣ ಮಾಡುವಂತಹ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಶಿಲ್ಪಾ ಶೆಟ್ಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಈ ಪ್ರಕರಣ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ನಟಿಯೂ ತಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದಾರೋ ಅದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದಿದೆ. ನಾವು ಕುಳಿತುಕೊಂಡು ಪ್ರತಿಯೊಂದು ವರದಿಗಳಿಗೂ ಮಾಧ್ಯಮ ಸಂಸ್ಥೆಗಳು ಯಾವ ಮೂಲಗಳನ್ನು ಉಲ್ಲೇಖಿಸುತ್ತಿವೆ ಎಂದು ಪರಿಶೀಲಿಸಬೇಕು ಎಂದು ನೀವು ಬಯಸುತ್ತೀರಾ?” ಎಂದು ನ್ಯಾಯಾಲಯ ಶಿಲ್ಪಾ ಶೆಟ್ಟಿ ಅವರ ವಕೀಲರಿಗೆ ಪ್ರಶ್ನಿಸಿದೆ.
ಪೊಲೀಸ್ ಮೂಲಗಳನ್ನು ಆಧರಿಸಿದ ಸುದ್ದಿ ವರದಿಗಳು ದುರುದ್ದೇಶಪೂರಿತ ಮತ್ತು ಮಾನಹಾನಿಕರ ಎಂದು ಕರೆಯಲಾಗುವುದಿಲ್ಲ. ನೀವು ಸಾರ್ವಜನಿಕ ಜೀವನದಲ್ಲಿದ್ದರೆ ಇಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಜನರು ನಿಮ್ಮ ಜೀವನದ ಬಗ್ಗೆ ಆಸಕ್ತರಾಗಿರುತ್ತಾರೆ. ಅವರು ಅಳುತ್ತಾರೆ ಮತ್ತು ತಮ್ಮ ಗಂಡನೊಂದಿಗೆ ಜಗಳವಾಡಿದ್ದಾರೆ ಎಂದು ಬರೆಯುವವರು ಹೇಗೆ ಮಾನಹಾನಿಯಾಗುತ್ತಾರೆ?” ನ್ಯಾಯಾಲಯ ಪ್ರಶ್ನಿಸಿದೆ.