LATEST NEWS
ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾದ ಬಾಲಿವುಡ್ ತಾರೆ ಶಿಲ್ಪಾಶೆಟ್ಟಿ

ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾದ ಬಾಲಿವುಡ್ ತಾರೆ ಶಿಲ್ಪಾಶೆಟ್ಟಿ
ಮಂಗಳೂರು ಜನವರಿ 31: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬಾಲಿವುಡ್ ಖ್ಯಾತ ನಟಿ ಶಿಲ್ಪಾಶೆಟ್ಟಿ ಆಗಮಿಸಿ ದೇವರ ದರ್ಶನ ಪಡೆದರು. ನಂತರ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದರು.
ತುಳುವಿನಲ್ಲಿ ಮಾತನಾಡಿದ ಶಿಲ್ಪಾ ಶೆಟ್ಟಿ ನಾನು ಏನು ಮಾತನಾಡಬೇಕು ಎಂದು ಯೋಚಿಸಿ ಬಂದಿಲ್ಲ. ನಾನು ಕಟೀಲಿನ ತಾಯಿಯ ಭಕ್ತೆ, ಕಟೀಲಿಗೆ ಯವಾಗಾಲೂ ಬರುತ್ತೇನೆ, ಅವರ ಆಶೀರ್ವಾದ ನಿಮ್ಮ ಪ್ರೀತಿ ಸಿಕ್ಕಿದರೆ ಸಾಕು, ನಿಮಗೂ ತಾಯಿ ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು.

ಶಿಲ್ಪಾ ಶೆಟ್ಟಿ ಜೊತೆ ಪತಿ ರಾಜ್ ಕುಂದ್ರ, ತಾಯಿ ಸುನಂದ ಶೆಟ್ಟಿ, ಸಹೋದರಿ ಶಮಿತಾ ಶೆಟ್ಟಿ ಹಾಗೂ ಕುಟುಂಬಕರೊಂದಿಗೆ ಕಟೀಲಿಗೆ ಆಗಮಿಸಿ ದೇವರ ದರ್ಶನ ಪಡೆದರು.