Connect with us

    DAKSHINA KANNADA

    ಮಂಗಳೂರು : ಕೊರಗಜ್ಜನ ಕೋಲದಲ್ಲಿ ಭಾಗವಹಿಸಿ ಹರಕೆ ತೀರಿಸಿದ ನಟಿ ಕತ್ರಿನಾ ಕೈಫ್, ಕ್ರಿಕೆಟರ್ K.L ರಾಹುಲ್..!!

    ಮಂಗಳೂರು : ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಕಾರ್ಣಿಕ ವಿಶ್ವವ್ಯಾಪಿ. ಬಾಲಿವುಡ್ ನಟಿ ಕತ್ರಿನಾ ಕೈಫ್, ಭಾರತೀಯ ಕ್ರಿಕೆಟರ್ ಕೆಎಲ್​ ರಾಹುಲ್​, ​ ಸೇರಿದಂತೆ ಬಾಲಿವುಡ್​ನ ಆನೇಕ ಸೆಲೆಬ್ರಿಟಿಗಳು ಭಾನುವಾರ ಉಳ್ಳಾಲ ಕುತ್ತಾರು ಕೊರಗಜ್ಜನ ಹರಕೆಯ ಕೋಲದಲ್ಲಿ ಭಾಗವಹಿಸಿ ಹರಕೆ ತೀರಿಸಿದ್ದಾರೆ.

    ನಟಿ ಕತ್ರಿನಾ ಕೈಫ್, ಅವರ ಪತಿ ವಿಕ್ಕಿ ಕೌಶಲ್, ನಟ ಸುನಿಲ್‌ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆಧ್ಯಾ ಶೆಟ್ಟಿ, ಕ್ರಿಕೆಟಿಗ ಕೆ.ಎಲ್ .ರಾಹುಲ್, ಮ್ಯಾಟ್ರಿಕ್ಸ್ ಎಂಟರ್​ಟೈನ್​ಮೆಂಟ್​ನ ರೇಷ್ಮಾ ಶೆಟ್ಟಿ ಹಾಗೂ ವಿ.ಎಮ್ ಕಾಮತ್ ಸೇರಿದಂತೆ ಒಟ್ಟು 9 ಮಂದಿಯ ಹೆಸರನ್ನು ಕೋಲ ಕಟ್ಟೆಯಲ್ಲಿ ಹರಕೆಯ ರೂಪದಲ್ಲಿ ಎರಡು ತಿಂಗಳ ಹಿಂದೆ ಬರೆಸಲಾಗಿತ್ತು.

     

    ಭಾನುವಾರ ನಡೆದ ಕೋಲದಲ್ಲಿ ನಟ ವಿಕ್ಕಿ ಕೌಶಲ್ ಹೊರತುಪಡಿಸಿ ಉಳಿದೆಲ್ಲರೂ ಭಾಗಿಯಾಗಿದ್ದರು.ಕತ್ರಿನಾ, ರೇಷ್ಮಾ ಶೆಟ್ಟಿ, ಆಥಿಯಾ ಶೆಟ್ಟಿ ಪರಂಪರೆಯಂತೆ ಕೋಲದಿಂದ ಹೊರಗುಳಿದು ಕಟ್ಟೆಯ ಕಚೇರಿಯಲ್ಲಿ ಕುಳಿತಿದ್ದರೆ, ಕ್ರಿಕೆಟಿಗ ರಾಹುಲ್ ಮತ್ತು ಅಹಾನ್ ಕೋಲದಲ್ಲಿ ಭಾಗಿಯಾಗಿದ್ದರು. ಕಟ್ಟೆಯೊಳಗೆ ಬೆಳಕಿಲ್ಲದೆ ನಡೆಯುತ್ತಿದ್ದ ಕೋಲವನ್ನು ಹೊರಗೆ ನಿಂತು ಕತ್ರಿನಾ ಕೈಫ್​ ಸೇರಿದಂತೆ ಉಳಿದವರು ನೋಡಿ ಧನ್ಯತಾ ಭಾವ ಅನುಭವಿಸಿದರು.ಸಂಜೆ 6 ಗಂಟೆ ವೇಳೆಗೆ ಕುತ್ತಾರಿಗೆ ಆಗಮಿಸಿದ್ದ ಗಣ್ಯರು ಮಾಧ್ಯಮಗಳಿಂದ ದೂರವೇ ಉಳಿದಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply