FILM
ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ-ಸೈಫ್ ದಂಪತಿ

ಮುಂಬೈ: ಬಾಲಿವುಡ್ ಜೋಡಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸುದ್ದಿಯನ್ನು ಸ್ವತಃ ನಟ ಸೈಫ್ ಅಲಿ ಖಾನ್ ತಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆ ಬಗ್ಗೆ ತಿಳಿಸಿದ್ದಾರೆ.
ಸೈಫ್ ಮತ್ತು ಕರೀನಾ ಅಕ್ಟೋಬರ್ 16, 2012ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ತೈಮೂರ್ ಎಂಬ ಮಗನಿದ್ದು ಡಿಸೆಂಬರ್ 20, 2016ರಂದು ಜನಿಸಿದ್ದನು. ನಾವು ನಮ್ಮ ಕುಟುಂಬಕ್ಕೆ ಮತ್ತೊಬ್ಬ ಅತಿಥಿಯ ಆಗಮನವಾಗುವುದನ್ನು ಕಾಯುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಸಹಕಾರ ಹಾಗೂ ಹಾರೈಕೆಗೆ ಧನ್ಯವಾದಗಳು ಎನ್ನುವ ಮೂಲಕ ಎರಡನೇ ಮಗುವಿನ ಆಗಮನದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕರೀನಾ ಗರ್ಭಿಣಿ ಎಂಬ ಕುರಿತ ಗಾಳಿಸುದ್ದಿಗಳು ಹರಿದಾಡುತ್ತಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಕರೀನಾ ತಂದೆ ರಣ್‌ಧೀರ್ ಕಪೂರ್ ‘ನನಗನ್ನಿಸಿದ ಹಾಗೆ ಇದು ಸತ್ಯ ಇರಬಹುದು. ಈ ಸುದ್ದಿ ನಿಜವಾದರೆ ನಾನು ತುಂಬಾನೇ ಸಂತಸ ಪಡುತ್ತೇನೆ. ಇಬ್ಬರು ಮಕ್ಕಳಿದ್ದರೆ ಒಳ್ಳೆಯದು. ಒಬ್ಬರಿಗೊಬ್ಬರು ಜೊತೆಯಾಗುತ್ತಾರೆ’ ಎಂದಿದ್ದರು. ಅದರೊಂದಿಗೆ ಈ ವಿಷಯದ ಬಗ್ಗೆ ಸೈಫ್ ಹಾಗೂ ಕರೀನಾ ತಮಗೆ ಏನು ತಿಳಿಸಿಲ್ಲ. ಇದು ಸತ್ಯವೋ ಸುಳ್ಳೋ ಎಂಬುದು ತಿಳಿದಿಲ್ಲ ಎಂದಿದ್ದರು.